ನಾಲಿಗೆ ಕತ್ತರಿಸಿ ಮರ್ಮಾಂಗ ಕೊಯ್ದ ಹೀನ ಕೃತ

0
179

ಬೆಂಗಳೂರು: ಕ್ರೂರ ಮನಸಿ ವ್ಯಕ್ತಿಗಳ ಗುಂಪೊಂದು ಒರಿಸ್ಸಾ ಮೂಲದ ವ್ಯಕ್ತಿಯೋರ್ವನನ್ನು ಅಪಹರಿಸಿ ಆತನ ಮರ್ಮಾಂಗ ಹಾಗೂ ನಾಲಿಗೆಯನ್ನು ಕತ್ತರಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದಾದರೂ ಎಲ್ಲಿ, ಆ ವ್ಯಕ್ತಿ ಯಾರು ಅಂತೀರ ಈ ಸ್ಟೋರಿ ನೋಡಿ ಹೀಗೆ ತನ್ನ ನಾಲಿಗೆ ಹಾಗೂ ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿರುವ ಈ ವ್ಯಕ್ತಿಯ ಹೆಸರು ಬಿಜು ನಾಯಕ್(20). ಈತ ಓರಿಸ್ಸಾ ಮೂಲದವನಾಗಿದ್ದು ಬೆಂಗಳೂರಿನ ವೈಟ್ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯ ಶೆಡ್ನಲ್ಲಿ ನೆಲೆಸಿದ್ದ. ಕಳೆದ ಎರಡು ದಿನಗಳ ಹಿಂದೆ ಗುರುವಾರ ಮದ್ಯರಾತ್ರಿ ಕ್ರೂರಮನಸ್ಸಿನ ನಾಲ್ವರು ಮುಸುಕು ದರಿಸಿಕೊಂಡು ಬಂದು ಬಿಜು ನಾಯಕ್ನನ್ನು ಅಪಹರಿಸಿಕೊಂಡು ಹೋಗಿ ಆತನ ಮರ್ಮಾಂಗದ ಚರ್ಮ ಹಾಗೂ ನಾಲಿಗೆಯನ್ನು ಸಂಪೂರ್ಣವಾಗಿ ಕತ್ತರಿಸಿ ನಿನ್ನೆ ಈತ ವಾಸವಿದ್ದ ಶೆಡ್ ಬಳಿ ತಂದು ಎಸೆದುಹೋಗಿದ್ದಾರೆ. ಈ ಘಟನೆ ಸಂಬಂದ ಪ್ರಕರಣ ದಾಖಲಿಸಿಕೊಂಡಿರುವ ವೈಟ್ಫಿಲ್ಡ್ ಪೊಲೀಸರು ಅಸ್ವಸ್ಥನಾಗಿದ್ದ ಬಿಜು ನಾಯಕ್ನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಪ್ರಕರಣ ಪೊಲೀಸರಿಗೂ ಸವಾಲಿನ ಪ್ರಶ್ನೆಯಾಗಿದ್ದು ಈತನಿಗೆ ಯಾರು ಶತ್ರುಗಳಿಲ್ಲದಿದ್ದರೂ ಇಂತಹ ಹೀನ ಕೃತ್ಯವೆಸಗಿದ ಸೈಕೋಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆ ಇಷ್ಟುದಿನ ಕೊಲೆ ಸುಲಿಗೆ ಇತ್ಯಾದಿ ಅಪರಾಧ ಕೃತ್ಯಗಳಿಂದ ಭಯಭೀತರಾಗಿದ್ದ ಸಿಲಿಕಾನ್ ಸಿಟಿ ಜನರಿಗೆ ಇದೀಗ ಮತ್ತೊಂದು ರೀತಿಯ ಭಯ ಆವರಿಸಿದ್ದು, ಇಂತಹ ಹೀನ ಕೃತ್ಯವೆಸಗಿದ ಸೈಕೋಗಳನ್ನು ಪೊಲೀಸರು ಬಂದಿಸಿ ಬೆಂಗಳೂರಿಗರ ಭಯವನ್ನು ಹೋಗಲಾಡಿಸುತ್ತಾರಾ ಎಂಬುದನ್ನು ಕಾದುನೊಡಬೇಕಿದೆ.

LEAVE A REPLY

Please enter your comment!
Please enter your name here