ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಪೊಲೀಸರ ಯಶಸ್ವಿ ಕಾರ್ಯಾಚರಣೆ. ದಾವಣಗೆರೆ ಮೂಲದ ನಿಧಿಗಳ್ಳರ ಸೆರೆ.ದೊಡ್ಡಬಳ್ಳಾಪುರ ತಾಲೂಕಿನ ತಂಬೇನಹಳ್ಳಿಯ ನರಸಮ್ಮ ಎಂಬುವರ ಮನೆಯಲ್ಲಿ ಘಟನೆ. ನಿಧಿ ಆಸೆಗೆ ಐವತ್ತು ಅಡಿ ಹಳ್ಳ ತೋಡಿದ್ದ ನಿಧಿ ಗಳ್ಳರು.ಕಳೆದ 21 ದಿನಗಳಿಂದ ನಿಧಿಗಾಗಿ ಮನೆಯಲ್ಲಿ ಪೂಜೆ 41 ದಿನಕ್ಕೆ ಬಲಿಗಾಗಿ ಸಿದ್ಧತೆ ನಡೆಸಿದ್ದ ನಿಧಿಗಳ್ಳರು. ಪೂಜೆ ಕಾರ್ಯಗಳಿಗೆ ಈಗಾಗಲೇ ನರಸಮ್ಮ ನಿಂದ ಒಂದು ಲಕ್ಷ ಹಣ ಖರ್ಚು ಮಾಡಿಸಿದ ಆರೋಪಿಗಳು.
ಘಟನೆಯ ವಿವರ: ನಿಮ್ಮ ಮನೆಯ ನೆಲದಲ್ಲಿ ಲಿಂಗ ರೂಪದಲ್ಲಿ ಪರಮಾತ್ಮ ಶಿವಾ ನೆಲೆಸಿದ್ದಾನೆ ತಾಯಿ ಹೊರತೆಗೆದು ಪೂಜಿಸು ಕುಬೇರಲಾಗ್ತೀಯ, ಊರು ಪುಣ್ಯ ಕ್ಷೇತ್ರ ವಾಗ್ತೈತೆ ನಿನ್ನಹೆಸರು ಪ್ರಸಿದ್ದವಾಗ್ತೈತೇ ಎಂದು ನಸುಕಿನಲ್ಲಿ ಬಂದ ಬುಡುಬುಡಿಕೆಯವ ನುಡಿದದ್ದನ್ನುನಂಬಿದ ದೈವ ಭಕ್ತೆ ನರಸಮ್ಮಮಗ ಮುತ್ತುರಾಜನಿಗೆ ವಿಷಯ ತಿಳಿಸಿದ್ದಾರೆ. ಮುತ್ತುರಾಜ ಪರಚಿತ ಜೆಸಿಬಿ ಚಾಲಕನ ಮೂಲಕ ದಾವಣಗೆರೆ ಮೂಲದ ಬಂದಿತ ಆರೋಪಿಗಳಿಂದ ನೆಲ ಅಗೆಸಿವುದಕ್ಕೆ ಮುಂದಾಗಿದ್ದಾರೆ, ಆದರೆ ಹತ್ತಡಿ, ಇಪ್ಪತ್ತಡಿ ಆಳ ಭೂಮಿ ಅಗೆದರೂ ದೇವರೂ ದೊರೆತಿಲ್ಲಾ ಲಿಂಗರೂಪದ ಒಂದು ಕಲ್ಲೂ ದೊರೆಯದಿದ್ದಾಗ ಕೆಲಸ ನಿಲ್ಲಿಸುವಂತೆ ತಡೆದರೂ.
ಇಲ್ಲ ದೇವರು ಸಿಗದಿದ್ದರೇನು 41 ದಿನ ಪೂಜೆ ಮಾಡಿ ಇನ್ನೊಂದಿಷ್ಟು ಆಳಕ್ಕೆ ಅಗೆದರೆ ನಿಧಿ ದಿಗುತ್ತೆ ಅದರಲ್ಲಿ ಕೊಪ್ಪರಿಗೆ,ಕೊಪ್ಪರಿಗೆ ಚಿನ್ನ ಸಿಗುತ್ತೆ ಪೂಜೆ ಮಾಡಿ ಬಿಡೋಣ ಎಂದು ನಂಬಿಸಿ ಆಸೆ ತೋರಿಸಿ ಪಾಪ ನರಸಮ್ಮನ ಹತ್ತಿರ ಲಕ್ಷದವರೆಗೂ ಹಣ ಖರ್ಚು ಮಾಡಿಸಿದ್ದಾರೆ.
ನರಸಮ್ಮನ ಮಗ ಮುತ್ತುರಾಜ ಈ ತಂಡದವರು ನಮಗೆ ವಂಚಿಸುತ್ತಿದ್ದಾರೆ ಎಂದು ಗ್ರಹಿಸಿ ದೊಡ್ಡ ಬೆಳವಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ದಾವಣಗೆರೆಯ ಅರುಣ್ ಕುಮಾರ್. ಚಂದ್ರಶೇಖರ್ .ಅಭಿಷೇಕ್. ರಂಗನಾಯ್ಕ್ ಎಂಬ ಆರೋಪಿಗಳನ್ನು ಬಂಧಿಸಿ ಮುಂದೆ ನಡೆಯ ಬಹುದಾದ ಬಲಿ ಕೃತ್ಯವನ್ನು ತಪ್ಪಿಸಿದ್ದಾರೆ. ಆರೋಪಿಗಳ ತಂಡವನ್ನು ಬಂದಿಸಿ ತನಿಖೆ ನಡೆಸಿದ ಪೊಲೀಸರು ನಾಲ್ಕೂಜನ ನಿಧಿಗಳ್ಳರನ್ನು ಜೈಲಿಗಟ್ಟಿದ್ದಾರೆ.