ನಿದ್ದೆಯಲ್ಲಿದ್ದ ಪೊಲೀಸರು, ಕದ್ದು ಹೋದ ಕದೀಮರು

0
2620

ತುಮಕೂರು/ಪಾವಗಡ; ಕಳೆದ ರಾತ್ರಿ ನಗರದ ಹಲವು ಕಡೆ ಕಳವು ಪ್ರಕರಣ ದಾಖಲಾಗಿವೆ ವಿಷೇಶ ವೆಂದರೆ .ಪೂಲೀಸ್ ಠಾಣೆಯ ಕೂಗಳತೆ ದೂರದ ಮಂಜುನಾಥ ಸ್ಟೋರ್, ರಾಘವೇಂದ್ರ ಮೆಡಿಕಲ್, ಶನಿಮಹಾತ್ಮ ದೇವಾಲಯದ ಸಮೀಪದ ಶಾಂತಿ ಮೆಡಿಕಲ್ಸ್.ಎನ್ ಕೆ ಬಾಲಾಜಿ ಶಾಪ್ ಮತ್ತು ಗುರುಭವನ ಹತ್ತಿರಿದ ಎಸ್ ಎಲ್ ಎನ್ ಮೆಡಿಕಲ್ಸ್ ಸೇರಿದಂತೆ ಒಟ್ಟು ೮ ಸ್ಥಳಗಳಲ್ಲಿ  ಸಾವಿರಾರು ರೂಗಳನು ದೋಚಿ ಪರಾರಿಯಾದ  ಕಳವು ಪ್ರಕರಣ ನಡೆದಿದಿದ್ದು ನಗರದ ಜನತೆಯಲ್ಲಿ ಆತಂಕ ಮತ್ತು ಹಲವು ಅನುಮಾನಗಳು ಸೃಷ್ಟಿಯಾಗಿವೆ.

ಒಂದೇ ರಾತ್ರಿಯಲ್ಲಿ ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಆರಕ್ಷರು ಯಾರ ರಕ್ಷಣೆಯಲ್ಲಿದ್ದರೋ? ಅಥವಾ ಕರ್ತವ್ಯ ಮರೆತು ಪೊಲೀಸರೇನು ಘಾಡ ನಿದ್ದೆಯಲ್ಲಿದ್ದರಾ? ಎಂಬ ಪ್ರಶ್ನೆ ನಗರವಾಸಿಗಳದ್ದಾಗಿದೆ.
ಸ್ಥಳೀಯರ ಹೇಳುವಂತೆ ನಗರದಲ್ಲಿ ಇತ್ತೀಚೆಗೆ ಪೊಲೀಸ್ ಸಿಬ್ಬಂದಿಯ ಕರ್ತವ್ಯ ವೈಫಲ್ಯವೇ ಇಷ್ಟೆಲ್ಲಾ ಕಳವು ಪ್ರಕರಣಗಳಿಗೆ ಕಾರಣ, ಎಂಬ ನೇರ ಆರೋಪ ತೆಗೆದು ಹಾಕುವಂತಿಲ್ಲ ಕಾರಣ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಇಷ್ಟೆಲ್ಲಾ ಕಳ್ಳತನಗಳು ನಡೆದರೆ ಪೊಲೀಸರೇನು ನಿದ್ದೆಮಾಡುತ್ತಿದ್ದಾರಾ? ಎಂಬ ಜನಸಾಮಾನ್ಯರ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳೇ ಉತ್ತರ ನೀಡಬೇಕಿದೆ.

 

ವರದಿ: ಮೈಕೆಲ್ ಪಾವಗಡ

LEAVE A REPLY

Please enter your comment!
Please enter your name here