ನಿಧಿಗಳ್ಳರ ಬಂಧನ

0
145

ಬಳ್ಳಾರಿ/ಹೊಸಪೇಟೆ: ಮನೆಯಲ್ಲಿ ನಿಧಿ ತೆಗೆಯುವ ಆಸೆ ಒಡ್ಡಿ,ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡೆಗಳನ್ನು ದೋಚಿ ಪರಾರಿಯಾದ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು, ಮಂಗಳವಾರ ಬಂಧಿಸಿದ್ದು, 23;ಲಕ್ಷ ಮೌಲ್ಯದ 800 ಗ್ರಾಮ ಚಿನ್ನದ ಒಡೆವೆಗಳನ್ನು ವಶಪಪಡಿಸಿಕೊಂಡಿದ್ದಾರೆ.

ಜಮಖಂಡಿಯ ನಿವಾಸಿ ಕೃಷ್ಣಜೀ (45), ತೆಲಂಗಾಣದ ಆಧಿಲಾಬಾದ್ ಶೇಖ್ ರಹೀಂ(35), ರಾಯಚೂರಿನ ಹಾಜಿ ಬಾಬಾ(33)ಹಾಗೂ ಹೊಸಪೇಟೆ ನಗರ ವೆಂಕಟೇಶ(43)ಬಂಧಿತ ಆರೋಪಿಗಳು.

ಕಳೆದ ಮಾ.3 ರಂದು ರಾತ್ರಿ ನಗರದ ರಾಣಿಪೇಟೆ ನಿವಾಸಿ ಎಲ್. ನಾಯಕ ಎನ್ನುವವರ ಮನೆಯಲ್ಲಿ ನಿಧಿ ಇದೆ ಎಂದು ನಂಬಿಸಿ, ಮನೆಯಲ್ಲಿದ್ದ ಚಿನ್ನದ ಒಡೆವೆಗಳನ್ನು ಪೂಜೆಗೆ ಇರಿಸಿ,ದೋಚಿ ಪರಾರಿ ಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದರು.
ಪಟ್ಟಣ ಠಾಣೆ ಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಎ.ಎಸ್.ಐ ಕುಮಾರ, ಸಿಬ್ಬಂದಿಯಾದ ಶ್ರೀಧರ, ಆನಂದರೆಡ್ಡಿ, ರಾಘವೇಂದ್ರ, ಮಾಣಿಕ್ಯ ರೆಡ್ಡಿ, ಸಣ್ಣ ಗಾಳೆಪ್ಪ, ಮಹಾಂತೇಶ, ಸೋಮಪ್ಪ, ರವಿಚಂದ್ರ, ದೇವೇಂದ್ರಪ್ಪ, ಮಲ್ಲೇಶ ಇವರ ತಂಡ, ಆರೋಪಿಗಳ ಪತ್ತೆಗಾಗಿ ಕಾರ್ರ್ಯಾಚರಣೆ ನಡೆಸಿದ್ದರು. ಎಸ್ಪಿ ಆರ್.ಚೇತನ್ ಹಾಗೂ ಹೆಚ್ಚುವರಿ ಎಸ್ಪಿ ಝಂಡೇಕರ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here