ನಿರಂತರ ನೀರು ಹರಿಸಿಲು ಶಾಸಕರಿಂದ ಮನವಿ….

0
211

*ವಿಜಯನಗರ ಕಾಲುವೆಗೆ ನಿರಂತರ ನೀರು ಹರಿಸಿಲು ಆನಂದ್ ಸಿಂಗ್ ಮನವಿ*

ಬಳ್ಳಾರಿ /ಹೊಸಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಕಾಲೂವೆಗಳಿಗೆ 11ತಿಂಗಳ ಕಾಲ ನೀರು ಬಿಡುವಂತೆ ಶಾಸಕ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
ನ.13ರಂದು ನಡೆಯಲಿರುವ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಹಿನ್ನಲೆ ರೈತರೊಂದಿಗೆ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರೊಂದಿಗೆ ಭಾನುವಾರ ಸಭೆ ನಡೆಸಿದ ಬಳಿಕ ಆನಂದ್ ಸಿಂಗ್ ಮಾತನಾಡಿದರು. ಅನಾದಿಕಾಲದಿಂದಲೂ ವಿಜಯನಗರ ಕಾಲೂವೆಗೆ ನೀರು ಬಿಡಬೇಕೆನ್ನುವ ನಿಯಮವಿದೆ. ಇದನ್ನು ಜಲಾಶಯ ನಿರ್ಮಾಣದ ವೇಳೆ ” ತುಂಗಭದ್ರಾ ಪ್ರಾಜೆಕ್ಟ್ ಎ ಪ್ರೋಫೈಲ್ ” ಎನ್ನುವ ಪುಸ್ತಕದಲ್ಲಿ ನಮೂದಾಗಿದೆ. ಹೀಗಾಗಿ ವಿಜಯನಗರ ಕಾಲುವೆಗೆ ಬಿಡುವ ನೀರನ್ನು ಕರ್ನಾಟಕ ಅಥವಾ ಆಂಧ್ರಪ್ರದೇಶ ಕೋಟಾ ಎಂದು ವಿಭಜನೆ ಮಾಡದೇ ವರ್ಷದ 11 ತಿಂಗಳು ನೀರು ಬಿಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲೂ ಧ್ವನಿ ಎತ್ತುವುದಾಗಿ ಆನಂದ್ ಸಿಂಗ್ ಹೇಳಿದರು. ಈ ವೇಳೆ ಮಾಜಿ ಶಾಸಕ ರತನ್ ಸಿಂಗ್, ಹೊಸಪೇಟೆ ರೈತ ಸಂಘದ ಅಧ್ಯಕ್ಷರಾದ ಗೋಸಲ ಭರ್ಮಪ್ಪ,ಉಪಾಧ್ಯಕ್ಷ ಬಿಸಾಟಿಸತ್ಯನಾರಾಯಣ, ಸಮಿವುಲ್ಲ,ಬಿ ನಾಗರಾಜ ತಿರುಮಲ ಕಿಚಡಿ ಶ್ರೀನಿವಾಸ ಸೇರಿದಂತೆ ಇತರ ರೈತರು ಇದ್ದರು.

LEAVE A REPLY

Please enter your comment!
Please enter your name here