ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ..

0
157

ಬಳ್ಳಾರಿ/ಹೊಸಪೇಟೆ:ಆತ್ಮಸ್ಥೈರ್ಯ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಪ್ರತಿಯೊಬ್ಬರು ಸಾಧನೆ ಮಾಡಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ಹೇಳಿದರು.ಸ್ಥಳೀಯ ಹೋಟೆಲ್ ಮಲ್ಲಿಗಿ ಸಭಾಂಗಣದಲ್ಲಿ ಸಮುತ್ಕರ್ಷ ಸಂಸ್ಥೆಯ ದಿಶಾ ಐ.ಎ.ಎಸ್. ಓರಿಯಂಟೆಲ್ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,
ಪ್ರತಿಯೊಬ್ಬರು ಜೀವನದಲ್ಲಿ ಎನನ್ನಾದರೂ ಸಾಧನೆ ಮಾಡಬಹುದು. ಅದಕ್ಕೆ ನಿರಂತರ ಪರಿಶ್ರಮ, ಆತ್ಮಸ್ತೈರ್ಯ, ನಿರಂತರ ಕಲಿಯುವ ಪ್ರವೃತ್ತಿ, ತಾಳ್ಮೆ, ಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು,  ಶಾಸಕಾಂಗಕ್ಕಿಂತಲೂ ಕಾರ್ಯಾಂಗ ಸಮರ್ಥವಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ಈ ದೇಶ ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಶಾಸಕಾಂಗದಿಂದ ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸುವುದು ಅಸಾಧ್ಯ.ಐಎಎಸ್. ಐಪಿಎಸ್ ತರಬೇತಿಗಾಗಿ ಪ್ರತಿಭಾನ್ವಿತರನ್ನು ಗುರುತಿಸಿ ತರಬೇತಿ ನೀಡುತ್ತಿರುವ ಸಮುತ್ಕರ್ಷದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಥೀಯೋಸಾಫಿಕಲ್ ಮಹಿಳಾ ಕಾಲೇಜಿನ ಕಾರ್ಯದರ್ಶಿ ಅಶೋಕ್ ಜೀರೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೋಪಿನಾಥ್ ರಾವ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ರಾಘವೇಂದ್ರ ರಾವ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಸ್.ರೇವಣಸಿದ್ದಪ್ಪ, ಕೆ.ಎಸ್.ಕೇಶವ್, ಅನೀಲ್ ಜೋಶಿ, ಸಂತೋಷ್ ಕೆಲಾಜಿ, ರಾಘವೇಂದ್ರ ಶೆಟ್ಟಿ, ರಮೇಶ ದೇಶಪಾಂಡೆ ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕು.ಶಿಲ್ಪ ಪ್ರಾರ್ಥಿಸಿದರು. ಸುಜಾತಾ ರೇವಣಸಿದ್ದಪ್ಪ ಹಾಗೂ ಕೌಸಲ್ಯ ವಾದಿರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here