ನಿರುದ್ಯೋಗಿಗಳಿಂದ ನೇರ ಮಾರುಕಟ್ಟೆ…!

0
117

ಮಂಡ್ಯ/ಮಳವಳ್ಳಿ : ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಪಾಸ್ ಸಂಸ್ಥೆ ತೆರೆದು ನೇರ ಮಾರುಕಟ್ಟೆ ಸ್ಥಾಪಿಸಿ ರಿಯಾಯಿತಿ ದರದಲ್ಲಿ ‌ಆಹಾರ ಪದಾರ್ಥಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದು ಪಾಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಮಾದವಕಿರಣ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಗ್ರಾಮದಲ್ಲಿ ತಮ್ಮ 35 ನೇ ಹುಟ್ಟುಹಬ್ಬವನ್ನು ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ಆಚರಿಸಿಕೊಂಡು ನಂತರ ಮಾತನಾಡಿ, ರಾಜ್ಯ ವ್ಯಾಪ್ತಿ ನಿರುದ್ಯೋಗಿ ಯುವಕ ಯುವತಿರಿಗೆ ಕೆಲಸ ಕೊಡುವ ಜೊತೆಗೆ ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ದಿನನಿತ್ಯ ಬಳಕೆ ಪದಾರ್ಥಗಳನ್ನು ಮನೆಗೆ ಸರಬರಾಜು ಮಾಡಲು ನಮ್ಮ ಸಂಸ್ಥೆ ಮುಂದಾಗಿದೆ ಎಂದರು ಈಗಾಗಲೇ ನಮ್ಮ ಸಂಸ್ಥೆಯಲ್ಲಿ 3000 ಜನ ಕೆಲಸ ನಿರ್ವಹಿಸುತ್ತಿದ್ದು, ಪತ್ರಿ ಗ್ರಾಮದಲ್ಲೂ ನಮ್ಮ‌ಸಂಸ್ಥೆ ಸ್ಥಾಪಿಸಲಾಗುವುದು, ಜೊತೆಗೆ ರೈತರಿಗೂ ಅನುಕೂಲವಾಗುವ ಎಲ್ಲಾ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಸಂಸ್ಥೆ ಯ ತಾಲ್ಲೂಕು ಮುಖ್ಯಸ್ಥೆಯ ಜಯಶೀಲ ಈರೇಗೌಡ ಸೇರಿದಂತೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here