ನಿರುಪಯುಕ್ತ ಈಜುಕೊಳ …?

0
71

ರಾಯಚೂರು: ರಾಯಚೂರು ಜಿಲ್ಲೆ ಎಂದ ಕೂಡಲೇ ನೆನಪಿಗೆ ಬರುವುದು ಶಾಖೋತ್ಪನ್ನ ಕೇಂದ್ರ , ರಾಯರ ದೇವಸ್ಥಾನ, ಹಾಗೂ ಬಿಸಿಲು ಇಂತಹ ಬಿಸಿಲು ನಾಡಿನಲ್ಲಿ ಸರ್ಕಾರದಿಂದ ನಿರ್ಮಾಣಗೊಂಡ ಈಜುಕೊಳ ಈಗ ಯಾವ ವ್ಯವಸ್ಥೆಗೆ ಬಂದಿದೆ ಈ ರಿಪೋರ್ಟ್ ನೋಡಿ.

ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣ ಪಕ್ಕದಲ್ಲಿರುವ ಯುವಜನ ಸೇವಾ ಕ್ರೀಡಾ ಇಲಾಖೆಯ ಈಜುಕೊಳ ಸಂಕೀರ್ಣವು ಕಳೆದ ಎಂಟು ತಿಂಗಳುಗಳಿಂದ ಲಾಕ್ ಮಾಡಿ ದುಸ್ಥಿತಿಗೆ ತಂದಿದ್ದಾರೆ ನೀರಿನಲ್ಲಿ ಪಾಚಿ ಬೆಳೆದಿದ್ದು ಈಜುಕೊಳದ ಸುತ್ತ ಮುತ್ತ ಎಲ್ಲ ಗಿಡ ಮರಗಳು ಬೆಳೆದು ಹಾಗೂ ಶೌಚಗೃಹವೂ ದುಸ್ಥಿತಿಗೆ ಬಂದಿದೆ.

ಬೈಟ್ : ಶರಣ ಪಾಟೀಲ್ ಶಿಕ್ಷಕ
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ನಗರ ಪ್ರದೇಶಗಳಲ್ಲಿ ಈಜಲು ಬಾವಿಗಳೇ ಸಿಗುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ಸರ್ಕಾರ ನಿರ್ಮಿಸಿದ ಈ ಈಜುಕೊಳವು ಮುಚ್ಚಿದ್ದರಿಂದ ಈಜುವ ಹವ್ಯಾಸ ಹೊಂದಿದ ಜನರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ.

ಬೈಟ್ : ರಮೇಶ ಸ್ಥಳೀಯ

ಬೇಸಿಗೆಯಲ್ಲಾದರೂ ಈಜುಕೊಳ ಆರಂಭವಾಗಿ ಆಶಾ ಭಾವನೆಯೊಂದಿದವರು ಜನ ನಿರಾಸೆ ವರ ನಡೆದಿದ್ದಾರೆ, ಇದೇನು ಉಚಿತ ಈಜುಕೊಳವಲ್ಲ ಗಂಟೆಗೆ ಐವತ್ತು ರೂಪಾಯಿಗಳಂತೆ ಈ ಹಣದಿಂದಲೇ ವ್ಯವಸ್ಥಿತವಾಗಿ ನೋಡಿ ಕೊಳ್ಳಬಹುದಿತ್ತು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯ ಬೇವಜವ್ಧಾರಿ ನಿರ್ಲಕ್ಷ್ಯತನ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ ಕಳೆದ ಒಂದು ವಾರದಿಂದ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಿಗದೆ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ.

ವರ್ಇ:ಮುತ್ತಣ್ಣ ಹೆಳವರ್

LEAVE A REPLY

Please enter your comment!
Please enter your name here