ನಿರ್ಲಕ್ಷಿಸಿ ವಿಭಜನೆಗೆ ಅವಕಾಶ ಕೊಡಬೇಡಿ .

0
209

ಬಳ್ಳಾರಿ /ಹೊಸಪೇಟೆ :ಕಳೆದ 25 ದಿನಗಳಿಂದ ತುಂಗಭದ್ರಾ ಜಲಾಶಯದ ಹೂಳೆತ್ತುವ ಜಾತ್ರೆ ನಡೆಯುತ್ತಿದ್ದು ರಾಜ್ಯ ವಿಧಾನಸಭೆಯ ಆದಿವೇಶನದಲ್ಲಿ ಕನಿಷ್ಠ ಅನುಕಂಪ ವ್ಯಕ್ತವಾಗಿಲ್ಲ, ಕೃಷ್ಣಾ – ಕಾವೇರಿ ಸಮಸ್ಯೆಗೆ ಸಿಗುವ ಪ್ರತಿಕ್ರಿಯೆ ತುಂಗಭದ್ರಾ ಜಲಾಶಯದ ಸಮಸ್ಯೆಗೆ ಯಾಕೆ ಸಿಗುವುದಿಲ್ಲ ಎಂದು ಕೊಟ್ಟೂರಿನ ಚಾನುಕೋಟಿ ಶ್ರೀಗಳು ಪ್ರಶ್ನೆ ಮಾಡಿದ್ದಾರೆ.

ಅವರು ತುಂಗಭದ್ರಾ ಜಲಾಶಯದ ಹೂಳೆತ್ತುವ ಜಾತ್ರೆಯ ತಾತ್ಕಾಲಿಕ ಅಂತ್ಯ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಮ್ಮ ಭಾಗದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಮೂಲಕ ನಮ್ಮ ಜನರನ್ನು ಕಡೆಗಣಿಸಬೇಡಿ, ಇದು ಮುಂದುವರೆದರೆ ವಿಭಜನೆಗೆ ನೀನೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಖಾರವಾಗಿ ನುಡಿದರು.

ತದನಂತರ ಮಾತನಾಡಿದ ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಮಾತನಾಡಿ ಇಲ್ಲೀವರೆಗೆ ತೆಗೆಯಲಾದ ಹೂಳಿನ ಬಗ್ಗೆ ಮಾಹಿತಿ ನೀಡಿದರು, 25 ದಿನಗಳ ಅವಧಿಯಲ್ಲಿ 1 ಲಕ್ಷ 70 ಸಾವಿರ ಟ್ರಿಪ್ ಗಳ ಮೂಲಕ 4 ಆಳ ಅಡಿ, ಅಂದಾಜು 15 ಎಕರೆಯಷ್ಟು ಹೂಳನ್ನು ತೆಗೆದಿರುವುದಾಗಿ ಹೇಳಿದರು.

ಹೂಳೆತ್ತಲು ಸ್ವಾಮೀಜಿಗಳು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಸೇರಿದಂತೆ ಹಲವು ಜನರು ನೀಡಿದ ದೇಣಿಗೆಯು 30 ಲಕ್ಷ 39 ಸಾವಿರದ 833 ರೂಪಾಯಿ ಸಂಗ್ರಹ ಆಗಿದ್ದು 30,15,183 ರೂಪಾಯಿ ಖರ್ಚು ಮಾಡಲಾಗಿದೆ ಎಂದರು.

ಹೂಳು ಈ ಭಾಗದ ಜನರ ಅತಿ ದೊಡ್ಡ ಸಮಸ್ಯೆಯಾಗಿದ್ದು ಸರ್ಕಾರ ಹೂಳು ತೆಗೆಯಲು ಮುಂದಾಗಬೇಕಿತ್ತು. ಆದರೆ ಮಾಡದ ಕೆಲಸವನ್ನು ರೈತರೇ ಮಾಡಲು ಮುಂದಾಗಿದ್ದೇವೆ. ಮುಂದಿನ ವರ್ಷಗಳಲ್ಲೂ ಇದು ಮುಂದುವರೆಯಲಿದೆ ಎಂದರು.
ಹೂಳಿನ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳ ವಿರುದ್ಧ ಮತ ಚಲಾಯಿಸಿ ಮೂಲೆಯಲ್ಲಿ ಕೂರಿಸಬೇಕೆಂದು ಖಾರವಾಗಿ ನುಡಿದರು.
ವಿವಿಧ ನಾಯಕರು, ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here