ನಿವೖತ್ತ ನೌಕರರಿಗೆ ಅಭಿನಂದನಾ ಸಮಾರಂಭ..

0
188

ಚಾಮರಾಜನಗರ/ಕೊಳ್ಳೇಗಾಲ:ವೀರಶೈವ ಸಮಾಜ ಸ್ವಾಭಿಮಾನಿ ಸಮಾಜವಾಗಿದ್ದು ವೀರಶೈವ ಮಠಗಳಿಂದ ಶೈಕ್ಷಣಿಕ ಕ್ರಾಂತಿ ಆಗುತ್ತಿದೆಎಂದು ರಾಜೇಂದ್ರಕುಮಾರ್ ಪೌಂಡೇಷನ್ ಸಂಸ್ಥಾಪಕ ಅದ್ಯಕ್ಷರೂ,ಚಾಮರಾಜನಗರ ಜಿಲ್ಲಾ ಬಿಜೆಪಿ  ಕಾಯ೯ದಶಿ೯ಗಳೂ ಆದ ಸಿ.ಎಂ. ರಾಜೇಂದ್ರಕುಮಾರ್ ಹೇಳಿದರು.ಅವರು ಪಟ್ಟಣದ ಜೆಎಸ್ ಎಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವೀರಶೈವ ನೌಕರರ ಸೇವಾ ಸಮಿತಿ ಹಾಗೂ ಪತ್ತಿನ ಸಹಕಾರಿ ಸಂಘದಗಳ ವತಿಯಿಂದ ಅಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಿವೖತ್ತ ನೌಕರರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,  ವೀರಶೈವ ಸಮಾಜಕ್ಕೆ

ಸಾಮಾಜಿಕ ಜವಾಬ್ದಾರಿ ಇದೆ.  ಆಗಾಗಿ ಈ ಸಮಾಜ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ  ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲ ಜಿಲ್ಲೆಯಲ್ಲಿ ಸಮಾಜ ಬೆಳವಣಿಗೆಗೆ ಪೂರಕವಾತಾವರಣ ನಿಮಾ೯ಣವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಕೆಲವು ಹಿತಾಸಕ್ತಿಗಳು ತಮ್ಮ ಸ್ವಾಥ೯ಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ,  ಆಗಾಗಿ ಸಮಾಜ ಗೊಂದಲದ ಸ್ಥಿತಿಯಲ್ಲಿದೆ.  ಇದಕ್ಕೆ ಕೆಲವು ಕಾಣದ ಕೈಗಳ ಕುಮ್ಮಕ್ಕಿದೆ,   ಅಂತಹವರಿಗೆ  ಸಿದ್ದಗಂಗಾಶ್ರೀಗಳೆ  ತಕ್ಕ ಉತ್ತರ ನೀಡಿ ನಾವು ವೀರಶೈವರೂ ಹೌದು, ಲಿಂಗಾಯಿತರೂ ಹೌದು ಎಂಬ ಸಂದೇಶ ರವಾನಿಸಿದ್ದಾರೆ ಎಂದರು.  ಸಮಾಜಕ್ಕೆ ಹೆಚ್ಚಿನ ರೀತಿಯಲ್ಲಿ ಕೊಡುಗೆ ನೀಡಿರುವುದೆ ವೀರಶೈವ ಸಮಾಜ ಎಂಬುದೆ  ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರತಿಭೆ ಯೊರೊಬ್ಬರ ಸ್ವತ್ತಲ್ಲ-
ಎಲ್ಲಾ ವಿದ್ಯಾಥಿ೯ಗಳಲ್ಲೂ ಒಂದಲ್ಲ ಒಂದು ರೀತಯಲ್ಲಿ  ಪ್ರತಿಭಾವಂತರೆ. ಅವರಲ್ಲಿನ ಪ್ರತಿಭೆ ಗುರುತಿಸಿ ಪುರಸ್ಕರಿಸುವ ಕೆಲಸ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ.
ಪ್ರತಿಭೆ ಇಂದು ಯಾರೊಬ್ಬರ ಸ್ವತ್ತಲ್ಲ ಎಂದರು.  ಇಂದಿನ ಕಾಯ೯ಕ್ರಮದಲ್ಲಿ ಸಾಧಕ ವಿದ್ಯಾಥಿ೯ಗಳು, ನಿವೖತ್ತ ಶಿಕ್ಷಕರನ್ನು ಗುರುತಿಸಿ ಪುರಸ್ಕರಿಸಿರುವುದು ಪ್ರೋತ್ಸಾಹದಾಯಕ ಹಾಗೂ
ಆಶಾಧಾಯಕ ಬೆಳವಣಿಗೆಯಾಗಿದೆ.  ನಿವೖತ್ತರಾಗಿರುವ ನೌಕರರು ನಿವೖತ್ತಿ ನಂತರ ನಿರಾಶರಾಗದೆ  ಸಮಾಜದ ಚಿಂತಾಕ್ರಾಂತರಾಗಿ ಕೂರುವ ಬದಲು ಅಭ್ಯುದಯಕ್ಕೆ ಹಾಗೂ
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರ ಜೊತೆ ಕೈಜೋಡಿಸಿ ಎಂದು ಸಲಹೆ ನೀಡಿದರು.
ಬಸವ ಸೇವಾ ಸಮಿತಿಯ ನೌಕರರು  ಸಂಸಾರಿಕ ಬದುಕುನ್ನು ಅಚ್ಚುಕಟ್ಟಾಗಿ ನಿವೖತ್ತಿ ವೖತ್ತಿಗೂ  ಗೌರವ ನೀಡುವ ಮೂಲಕ ಸಮತೋಲನ ಕಾಪಾಡಿಕೊಳ್ಳಿ,  ಕಾಯ೯ನಿವ೯ಹಣೆ
ಮಾನಸಿಕ ನೋವುಗಳಾದರೆ ಹಿರಿಯರು ಹಾಗೂ ಕಿರಿಯ ಅಧಿಕಾರಿಗಳ ಜತೆ ನಿಮ್ಮ ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಳ್ಳಿ, ಪರಿಹಾರವಾಗದ ಸಮಸ್ಯೆ ಯಾವುದು ಇಲ್ಲ ಎಂದರು.
ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಯಕಶ್ರೀ ಪ್ರಶಸ್ತಿ ಪುರಸ್ಕೖತರಾದ ಡಾ.ಶಿವರುದ್ರಸ್ವಾಮಿ ಮಾತನಾಡಿ,  ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ
ವೀರಶೈವರಲ್ಲಿ ಜಾಗೖತಿ ಆಗುತ್ತಿದೆ. ಬಸವ ಸೇವಾ ಸಮಿತಿ 22ವಷ೯ಗಳಲ್ಲಿ ಸಮಾಜ ಮುಖಿ ಸೇವಾ ಕಾಯ೯ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಸೇವೆ ಕುರಿತು ಕಿರು ಹೊತ್ತಿಗೆ
ಹೊರತನ್ನಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ   ನಿವೖತ್ತ ನೌಕರರುಗಳಾದ ಗೌಡಪ್ಪ, ಶಿವಸ್ವಾಮಿ, ಸೋಮಶೇಖರ್, ಶಿವಮೂತಿ೯, ಪ್ರಭುಸ್ವಾಮಿ, ಪುಟ್ಟಪ್ಪ, ಪುಟ್ಟಸ್ವಾಮಿ, ಶಿವಪ್ರಕಾಶ್,
ಮಹದೇವಪ್ಪ, ಶಿವಕುಮಾರಸ್ವಾಮಿ,  ತೋಟಸ್ವಾಮಿ, ಮಹದೇವಸ್ವಾಮಿ ಸೇರಿದಂತೆ ಇನ್ನಿತರರು ಅಭಿನಂದಿಸಿ ಗೌರವಿಸಲಾಯಿತು. ದೇಶಿ ತಳಿ ರಕ್ಷಣೆಯಲ್ಲಿ ತೊಡಗಿರುವ
ರೈತ ಮಾಲಂಗಿ ರೇಚಣ್ಣ, ಶಿಕ್ಷಕ ಶಾಂತಮೂತಿ೯, ಪತ್ರಕತ೯ ನಾಗೇಂದ್ರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿಭಾನ್ವಿತ ವಿದ್ಯಾಥಿ೯ಗಳಾದ ನಾಗಶಿಲ್ಪ,  ಸಂಯುಕ್ತ, ಪ್ರೀತು, ಅಭಿಷೇಕ್, ಚಲನ, ಮುಕ್ತ,  ಮೋಹನಾಂಭ, ರಂಜಿತಾ, ಅಂಜನಾ, ಗುರುಮೂತಿ೯ ಸೇರಿದಂತೆ ಹಲವು
ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಇದೇ ಸಂದಬ೯ದಲ್ಲಿ ಜಿಲ್ಲಾ ಹಾಲು ಒಕ್ಕೂಟದಅದ್ಯಕ್ಷ   ಗುರುಮಲ್ಲಪ್ಪ, ಹಾಲಹಳ್ಳಿ ತೋಟೇಶ್, ಮಧುವನಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು
ನರಸೀಪುರ ತಾಲೂಕಿನ ಮುಡುಕನಪುರ ಮಠಾಧೀಶರಾದ ಷಡಕ್ಷರಿದೇಶಿಕೇಂದ್ರಸ್ವಾಮಿಜಿ,  ಚಾ.ನಗರ ಸಂಘದ ಆರ್.ಎಂ. ಸ್ವಾಮಿ, ಪತ್ತಿನ ಸಂಘದ ಅದ್ಯಕ್ಷ ವೀರಭದ್ರಸ್ವಾಮಿ,
ಬಸವಾ ಸೇವಾ ಸಮಿತಿ ಅದ್ಯಕ್ಷ ಎಸ್.ಮಲ್ಲೇಶಪ್ಪ, ಕಾಯ೯ದಶಿ೯ ಶಾಂತಮೂತಿ೯, ಮಹದೇವಸ್ವಾಮಿ, ಶಿವಸ್ವಾಮಿ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here