ನೀಡುವುದಕ್ಕಾಗಿ ಬೇಡುವುದು ಪುಣ್ಯದ ಕೆಲಸ..‌

0
115

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಬಿಕ್ಷಾಟನೆ ಮಾಡುವುದರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ಕರವೇ – ನಿರ್ಗತಿಕರಿರ ಪುನರ್ವಸತಿಗಾಗಿ ಬಿಕ್ಷಾಟನೆ

ನಿರ್ಗತಿಕರಿಗಾಗಿ ಬಿಕ್ಷಾಟನೆ ಮಾಡುವ ಮಖಾಂತರ ಹಣ ಸಂಗ್ರಹಿಸುವ ಮುಖಾಂತರ ವಿಭಿನ್ನವಾಗಿ ದೊಡ್ಡಬಳ್ಳಾಪುರದ ಕರವೇ ಸಂಘನೆಯು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದಿರುವ ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣವೇಧಿಕೆಯ ಪದಾಧಿಕಾರಿಗಳು ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿದ್ದಾರೆ. ಸೇವಾ ಮನೋಭಾವದಿಂದಲೆ ಸಂಘನೆಗೆ ಸೇರಿರುವ ಸದಸ್ಯರು ಪ್ರತಿ ತಿಂಗಳು 5ನೇ ತಾರೀಕಿನಂದು ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಸರ್ವಜನಿಕರಿಂದ ದವಸ ದಾನ್ಯ ಬಟ್ಟೆಗಳನ್ನು ಪಡೆದು ಬೆಂಗಳೂರಿನಲ್ಲಿ ಆಟೋ ರಾಜ ಹೋಮ್ ಆಪ್ ಹೋಪ್ ಸಂಸ್ಥೆಗೆ ದೇಣಿಗೆಯಾಗಿ ನೀಡುತ್ತಿದ್ದರು. ಇಂದು ಸಹ ಕರವೇ ಕಾರ್ಯಕರ್ತರು ದೊಡ್ಡಬಳ್ಳಾಪುರದ ಮಾರುತಿನಗರದಲ್ಲಿ ಆಚರಿಸಿದ ರಾಜ್ಯೋತ್ಸವಕ್ಕೆ ಆಟೋ ರಾಜ ಹೋಮ್ ಆಪ್ ಹೋಪ್ ಸಂಸ್ಥೆಯ ಮುಖ್ಯಸ್ಥರಾದ ಆಟೋರಾಜರವರನ್ನು ಕರೆಸಿ ನಗರದ ಮುಖ್ಯ ರಸ್ತೆಯಲ್ಲಿ ಬಿಕ್ಷಾಟನೆ ಮಾಡುವ ಮೂಲಕ ಸಂದಾಯವಾದ ಹಣವನ್ನು ಬಿಕ್ಷುಕರು, ನಿರ್ಗತಿಕರ ಪುನರ್ವಸತಿಗೆ ನೀಡಿದ್ದಾದ್ದಾರೆ. ಇದೇ ವೇಳೆ ಸಮಸ್ತ ಕನ್ನಡಿಗರಿಗೂ ಧನ್ಯವಾದಗಳು ಸಲ್ಲಿಸಿದ ಆಟೋರಾಜ ಕಳೆದ 21 ವರ್ಷಗಳಿಂದಲೂ ನಿರ್ಗತಿಕರು ಮತ್ತು ಬಿಕ್ಷುಕರಿಗೆ ತನ್ನ ಜೀವನವನ್ನು ಮುಡುಪಾಗಿಟ್ಟಿರುವ ಆಟೋರಾಜನ ಭರವಸೆಯ ಮನೆಯಲ್ಲಿ ಇಂದಿಗೂ ಸುಮಾರು 750 ಜನ ಆಶ್ರಯ ಪಡೆದಿದ್ದಾರೆ.ಇವರೆಗೂ 11 ಸಾವಿರಕ್ಕೂ ಹೆಚ್ಚು ಜನ ನಿರ್ಗತಿಕರಿಗೆ ಆಶ್ರಯ ನೀಡಿರುವ ಆಟೋರಾಜ 5000ಕ್ಕೂ ಹೆಚ್ಚು ಅಂತ್ಯ ಸಂಸ್ಕಾರಗಳನ್ನು ಮಾಡಿ ಇತರರಿಗೆ ಮಾದರಿಯಾದರೆ. ದೊಡ್ಡಬಳ್ಳಾಪುರದ ನಾಗರೀಕರು ಕರಾವೇ ಮುಖಾಂತರ ಆಟೋರಾಜರ ಭರವಸೆಯ ಮನೆಯಲ್ಲಿರುವ ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವುದರೊಂದಿಗೆ ಸಾರ್ಥಕತೆ ಮೆರೆದಿದ್ದಾರೆ…

ಬೈಟ್, ಲೋಕೆಶ್, ಕರವೇ ಕಾರ್ಯದರ್ಶಿ
ಬೈಟ್, ಆರಾದ್ಯ, ಕರವೇ ತಾಲೂಕು ಅಧ್ಯಕ್ಷ
ಬೈಟ್, ಆಟೋರಾಜ, ಆಟೋ ರಾಜ ಹೋಮ್ ಆಪ್ ಹೋಪ್ ಸಂಸ್ಥೆಯ ಮುಖ್ಯಸ್ಥ

LEAVE A REPLY

Please enter your comment!
Please enter your name here