ನೀತಿಸಂಹಿತೆ ಉಲ್ಲಂಘನೆ, ಶಾಸಕರ ವಿರುದ್ಧ ದೂರು ದಾಖಲು

0
107

ಬೆಳೆ ಹಾನಿ ಪರಿಹಾರದ ಭರವಸೆ ನೀಡಿದ ಶಾಸಕರ ವಿರುದ್ಧ ದೂರು ದಾಖಲು

ರಾಯಚೂರು:ಮಳೆಗೆ ರೈತನ ಬೆಳೆ ಮತ್ತು ಮನೆ ಶೇಡ್ ಗಾಳಿಗೆ ಹಾರಿಹೋಗಿದ್ದು ಪರಿಹಾರ ನೀಡುವ ಭರವಸೆ ನೀಡಿ ನೀತಿ ಸಂಹಿತೆ ಉಲ್ಲಂಘನೆಯಡಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ತಗಲಾಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿ ರೈತರ ಭತ್ತ,ಮಾವಿನ ಫಸಲು ಬೆಳೆ ಮತ್ತು ಮನೆಯ ಟೀನ್ ಶೆಡ್ ಹಾನಿಯಾಗಿತ್ತು. ಲಕ್ಷಾಂತರ ಬೆಳೆ ಹಾನಿಯಾ ಗಿತ್ತು. ಯಾಪಲದಿನ್ನಿ, ಸಿಂಗನೋಡಿ, ಬಾಪೂರು ,ಭಾಯಿದೊಡ್ಡಿ ಗ್ರಾಮಗಳಿಗೆ ಇಂದು ಬೇಟಿ ನೀಡಿ ಚುನಾವಣೆ ನೀತಿ ಸಂಹಿತೆ ಅರಿ ವಿಲ್ಲದೇ ಸರಕಾರದಿಂದ ಮತ್ತು ವೈಯಕ್ತಿಕ ವಾಗಿ ಬೆಳೆ ಹಾನಿ ಪರಿಹಾರ ನೀಡುವ ಭರವಸೆ ನೀಡಿದ್ದರು.ಚುನಾವಣೆ ನೀತಿ ಸಂಹಿತೆಯಡಿ ಗ್ರಾಮೀಣ ಶಾಸಕ ತಿಪ್ಪರಾಜು‌ ಹವಾಲ್ದಾರ್ ವಿರುದ್ಧ ಚುನಾವಣೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here