ನೀರಿಗಾಗಿ ಟ್ರ್ಯಾಕ್ಟರ್ ಜಾಥಾ,ಪ್ರತಿಭಟನೆ

0
211

ಯಾದಗಿರಿ/ ಸುರಪುರ: ತಾಲೂಕಿನ ನಾರಾಯಣಪುರದಲ್ಲಿ ರೈತ ಮುಖಂಡ,ಮಾಜಿ ಸಚಿವ, ಹಾಗೂ ಬಿ.ಜೆ.ಪಿ ಎಸ್ಟಿ ಮೊರ್ಚಾ ರಾಜ್ಯಾಧ್ಯಕ್ಷ (ನರಸಿಂಹನಾಯಕ) ರಾಜುಗೌಡ ನೇತೃತ್ವದಲ್ಲಿ ನೀರಿಗಾಗಿ ಟ್ರ್ಯಾಕ್ಟರ್ ಜಾಥಾ ನಡೆಸಿದರು. ನಾರಾಯಣಪುರ ಎಡದಂಡೆ ನಾಲೆಗೆ ಇದೇ ತಿಂಗಳು 22 ರಿಂದ ಏಪ್ರಿಲ್ 5 ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ನಾರಾಯಣಪುರದ ವರೆಗೆ ಬೃಹತ್ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಳ್ಳಲಾಯಿತು.ರೈತ ಮುಖಂಡರು, ಸಾರ್ವಜನಿಕರೂ ಅನೇಕರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಡದಂಡೆ ನಾಲೆಗೆ ತುರ್ತಾಗಿ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

LEAVE A REPLY

Please enter your comment!
Please enter your name here