ನೀರಿನ ಮಿತ ಬಳಕೆಗೆ ಮನವಿ

0
172

ಮಂಡ್ಯ/ಮಳವಳ್ಳಿ:ನಂಜಾಪುರ ಏತ ನೀರಾವರಿ ಮೂಲಕ ಇಂದಿನ ಮೂರು ಪಂಪ್ ಸೆಟ್ ಗಳ ನಾಲೆಗಳಿಗೆ ನೀರು ಬಿಡಲಾಗುತ್ತಿದ್ದು , ಕೆರೆ,ಕಟ್ಟೆಗಳನ್ನು ತುಂಬಿಸಿ ಜಾನುವಾರುಗಳಿಗೆ ಕುಡಿಯಲು ಬಳಸುವಂತೆ ರೈತರಿಗೆ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ಮನವಿ‌ ಮಾಡಿಕೊಂಡಿದ್ದಾರೆ. ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರ ಪರಿಶ್ರಮದಿಂದ ಒಂದು ಪಂಪ್ ಸೆಟ್ ನಿಂದ ನಾಲೆಗೆ ಬರುತ್ತಿದ್ದ ನೀರನ್ನು ಈ ದಿನದಿಂದ ಮೂರು ಪಂಪ್ ಸೆಟ್ ಬಳಸಿ ನಾಲೆಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಮಳವಳ್ಳಿ ಕ್ಷೇತ್ರದಲ್ಲಿ ಕೆರೆಕಟ್ಟೆಗಳು ಬರಿದಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪ್ಪಿಸುತ್ತಿದ್ದು, ಇದಲ್ಲದೆ ತಾಲ್ಲೂಕಿನ ಲ್ಲಿ ಅಂರ್ತಜಲ ಕುಸಿತವಾಗಿದ್ದು, ಈಗ ಬರುವ ನೀರನ್ನು ಕೃಷಿ ಚಟುವಟಿಕೆಗೆ ಬಳಸದೆ ಕೆರೆ ಕಟ್ಟೆಗಳಿಗೆ ತುಂಬಿಸಲು ಬಳಸಿಕೊಳ್ಳುವಂತೆ ತಿಳಿಸಿದರು. ಇದಲ್ಲದೆ ಕೆಆರ್ ಎಸ್ ಅಣೆಕಟ್ಟು ನಿಂದ ವಿಸಿ ನಾಲೆಯಲ್ಲಿ ಬರುವ ನೀರನ್ನು ಮೇಲ್ಬಾಗದಲ್ಲಿ ಅನದಿಕೃತ ಪಂಪ್ ಸೆಟ್ ಬಳಸಿಕೊಂಡು ಈ ಭಾಗಕ್ಕೆ ನೀರು ಬರುತ್ತಿಲ್ಲ ಆದರೆ ವಿರೋದಪಕ್ಷ ದವರು ಅದರ ವಿರುದ್ದ ಹೋರಾಟ ಮಾಡುವುದನ್ನು ಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಮೇಲ್ಬಾಗದ ವರು ವಿರುದ್ದ. ಹೋರಾಟ ಮಾಡುವುದಾರೆ ನಾವು ಸಹ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ.ಅದನ್ನು ಬಿಟ್ಟು ರಾಜಕೀಯ ಪಿತೂರಿ ಮಾಡದಂತೆ ತಿಳಿಸಿದರು. ಗೋಷ್ಠಿಯಲ್ಲಿ ಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್ .ಎನ್ ವಿಶ್ವಾಸ್, ಜಿ.ಪಂಸದಸ್ಯೆ ಸುಜಾತಪುಟ್ಟು ಇದ್ದರು

LEAVE A REPLY

Please enter your comment!
Please enter your name here