ನೀರು ಹಾಯಿಸುವಂತೆ ರೈತ ಸಂಘದ ಬೃಹತ್ ಪ್ರತಿಭಟನೆ

0
230

ಬಳ್ಳಾರಿ./ಸಿರುಗುಪ್ಪ:ಈ ಬಾರಿ ತಡವಾಗಿ ಯಾದರೂ ತುಂಗಭದ್ರಾ ಜಲಾಶಯದಲ್ಲಿ 53 ಟಿಎಂಸಿ ನೀರು ಸಂಗ್ರಹಗೊಂಡಿದ್ದು ಕೂಡಲೇ ಹೆಚ್ ಎಲ್ ಸಿ ಹಾಗೂ ಎಲ್ ಎಲ್ ಸಿ ಕಾಲುವೆಗೆ ನೀರು ಹಾಯಿಸುವಂತೆ ತುಂಗಭದ್ರಾ ರೈತ ಸಂಘದ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಅವ ನೇತೃತ್ವದಲ್ಲಿ ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ನಲ್ಲಿ ವಾಹನಗಳನ್ನು ತಡೆ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಅಸಂಖ್ಯಾತ ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ. ಘೋಷಣೆ ಗಳನ್ನು ಕೂಗಿದ್ರು.ಜಲಶಾಯದ ನೀರನ್ನು ಕೈಗಾರಿಕೆಗಳಿಗೆ ಪೂರೈಸುವಲ್ಲಿ ತೋರಿಸುವ ಆಸಕ್ತಿ ರೈತರಿಗೆ ತೋರುತ್ತಿಲ್ಲ. ನೀರಾವರಿ ಮಂತ್ರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಉದ್ಯಮಿಗಳ ಕೈಗೊಂಬೆಯಾಗಿದ್ದಾರೆ. ಇದರಿಂದ ರೈತರಿಗೆ ಭಾರೀ ಅನ್ಯಾಯವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಗಾರು ಕೈಕೊಟ್ಟಿದೆ.‌ ಬೆಳೆ ಬೆಳೆಯಲಾದರೂ ಜಲಾಶಯದಿಂದ ನೀರು ಪೂರೈಸಬೇಕೆಂದು ರೈತರು ಆಗ್ರಹಿಸಿದ್ದಾರೆ.ಬೆಳಿಗ್ಗೆಯಿಂದ ನಡೆದ ಈ ಹೋರಾಟದ ವೇಳೆ ನೂರಾರು ವಾಹನಗಳು ಕೂಡ ಜಮಾವಣೆಗೊಂಡು ಕೆಲಹೊತ್ತು ಸಂಚಾರಕ್ಕೆ ಅಡಚಣೆ ಆಗಿತ್ತು. ರೈತರ ಈ ಹೋರಾಟಕ್ಕೆ ಸರ್ಕಾರ ಮಣಿಯುವುದೇ? ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here