ನೀವು ವಿಕಲಾಂಗರಲ್ಲ ಸಕಲಾಂಗ ಚೇತನರು.

0
147

ಬಳ್ಳಾರಿ/ಬಳ್ಳಾರಿ:ವಿಕಲಾಂಗರೆಂಬ ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸದಿಂದ ಮುನ್ನಡೆದರೆ ನೀವು ಸಮರ್ಥರೆಂಬುದನ್ನು ಸಾರಲು ಯೋಗಾಭ್ಯಾಸವು ಪೂರಕ ಶಕ್ತಿಯಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರ ವೆಂಕಟ ರಮಣ ಹೇಳಿದರು.ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ನಡೆದ ಕಲ್ಪತರು ಜ್ಞಾನ ಯೋಗ ಕೇಂದ್ರ ಆಯೋಜಿಸಿದ್ದ ಯೋಗ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಸಸಿಗೆ ನೀರೆರೆದು ಮಾತನಾಡಿ, ಯೋಗಾಭ್ಯಾಸದ ನಿರಂತರ ಸಾಧನೆಯಿಂದ ತಾವು ಸಂಕಲ್ಪಿಸಿದ ಗುರಿಯನ್ನು ತಲುಪಲು ಸಾಧ್ಯ ಎಂದರು.

ಶಿರಿಡಿ ಸಾಯಿಬಾಬ ಮಂದಿರದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ವಿಧ್ಯಾರ್ಥಿಗಳು ಶ್ರಮ ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ನಿಮ್ಮ ಬದುಕನ್ನು ನಿವೇ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಸಮರ್ಥನಂ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಮಾಡುವ ಮನಸ್ಸು ನನಗೆ ಶ್ರೀ ಸಾಯಿಬಾಬರವರು ನೀಡಿದ್ದಾರೆ, ನಿಮ್ಮ ಸೇವೆಯಲ್ಲಿಯೇ ಭಗವಂತನ್ನು ಕಾಣುವ ನಾನು ನಿಮಗಾಗಿ ಆಹಾರ, ಹಣ್ಣು ಹಂಪಲು, ಹಾಲು, ನೀರು ಮತ್ತು ಕಾಯಿಪಲ್ಲೆಗಳನ್ನು ನಿರಂತರವಾಗಿ ನೀಡುವುದನ್ನು ಮುಂದುವರಿಸುತ್ತೇನೆ ಎಂದರು.
ಪಾಲಿಕೆ ಸದಸ್ಯ ಎಸ್ ಮಲ್ಲನ ಗೌಡ ಮಾತನಾಡಿ, ನಮ್ಮ ಪರಿಧಿಯಲ್ಲಿರುವ  ಈ  ಸಮರ್ಥನಂ ಅಂಗವಿಕಲರ ಸಂಸ್ಥೆಗೆ, ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ಪೂರಕವಾದ ಸಹಾಯ ಮಾಡುವೆ ಎಂದರು.ಯೋಗವನ್ನು ವಾರಮಾಡಿ  ಬಿಡುವುದಲ್ಲ. ನಿರಂತರ ಆಭ್ಯಾಸದಿಂದ ನಿಮ್ಮ ಶರೀರ ಮತ್ತು ಮನಸ್ಸು ಅದ್ಭುತಗಳನ್ನು ಮಾಡಬಲ್ಲದು ಎಂದು ತಿಳಿಸಿದರು.ವಿವೇಕಾನಂದ ಯುವಕ ಸಂಘ, ನಗರ ದೇವತೆ ದುರ್ಗಮ್ಮ ದೇವಸ್ಥಾನದ ಧರ್ಮಧರ್ಶಿ ಗಾದೆಪ್ಪ ಮಾತನಾಡಿ, ನಿಮ್ಮ ಸಾಧನೆ ತೃಪ್ತಿತರುವಂತಹದಾಗಿದೆ. ತಮಗೆ ಬೇಕಾದ ಸಹಾಯ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಗನಕಲ್ಲು ರಾಜೇಂದ್ರ ಪ್ರಸಾದರವರು  ಸಮರ್ಥನಂ ಅಂಗವಿಕಲರ ಸಂಸ್ಥೆಯವರಿಗೆ ಒಂದು ಧ್ವನಿವರ್ದಕ ಯಂತ್ರವನ್ನು ಉಡುಗೊರೆ ನೀಡಿ ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.ಪ್ರಾರಂಭದಲ್ಲಿ ವಿಕಲಾಂಗ ಮಕ್ಕಳೊಂದಿಗೆ ಎಲ್ಲಾ ಗಣ್ಯಮಾನ್ಯರು ಧ್ಯಾನವನ್ನು ಮಾಡಿದರು. ಯೋಗ ಶಿಕ್ಷಕ ತಿಪ್ಪಯ್ಯಶೆಟ್ಟಿ ಸಂಸ್ಥೆಗೆ 6 ಸಾವಿರ ರೂಪಾಯಿ ದೇಣಿಗೆ ನೀಡುವದಾಗಿ ಭರವಸೆ ನೀಡಿದರು.ಅಲ್ಲದೇ ಯೋಗ ಶಿಕ್ಷಕ ತಿಪ್ಪಯ್ಯಶೆಟ್ಟಿ  ಮತ್ತು   ರಾಜಶೇಖರ ಮಕ್ಕಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ಮಾಡಿತೋರಿಸಿದರು. ಮೂಗ ಮತ್ತು ಕಿವುಡ ವಿಧ್ಯಾರ್ಥಿಯಾದ ಆನಂದ್ ಕುಮಾರ ಗುರುಗಳೊಂದಿಗೆ ಮಾಡಿದ ಯೋಗ ಜುಗಲ್‍ಬಂದಿ ಎಲ್ಲರ ಗಮನ ಸೆಳೆಯಿತು.ಅಂಗವಿಕಲರಾದ ದೇವಣ್ಣ ಮತ್ತು ಗಾಳೆಪ್ಪ ಪ್ರಾರ್ಥಿಸಿ ದರು. ಗ್ಯಾನನಗೌಡ ಹಾಗು ಮಹಮದ್ ರಫಿ ಯೋಗ ಕುರಿತು ಪದ್ಯವಾಚಿಸಿದರು. ಅಧ್ಯಕ್ಷತೆಯನ್ನು ಕಲ್ಪತರು ಜ್ಞಾನಯೋಗ ಕೇಂದ್ರದ ಸಂಘಟಕ ಚಿದಂಬರ ವಹಿಸಿದ್ದರು. ಸಭೆಯಲ್ಲಿ ಪಾಲಿಕೆ ಸದಸ್ಯೆಿ ಚಂದ್ರಕಲಾ, ಶಿವರಾಜ ಪತಂಜಲಿ ಯೋಗ ಸಮಿತಿಯ ಉಪಾದ್ಯಕ್ಷ, ವಿ.ವಿ. ಸಂಘದ ಅಧ್ಯಕ್ಷ ಉಡೇದ ಬಸವರಾಜ ಮತ್ತು ಸಂಸ್ಥೆಯ ಗೌತಮಿ, ಕಾಡಸಿದ್ದ, ರಾಧಿಕಾ ರಾಣಿ ಮತ್ತು ಶಾಲಿನಿಯವರಿಂದ ಉಪಹಾರ ವ್ಯವಸ್ತೆಯನ್ನು ಮಾಡಲಾಗಿತ್ತು. ಪತಂಜಲಿ ಯೋಗ ಸಮಿತಿಯ ಸಲಹೆಗಾರರಾದ ಇಸ್ವಿ ಪಂಪಾಪತಿಯವರು ವಂದಿಸಿದರು. ಕಲ್ಪತರು ಜಾ್ಞನಯೋಗ ಕೇಂದ್ರದ ಸಂಚಾಲಕ ಕಾಳಪ್ಪ ಪತ್ತಾರ್ ಕಾರ್ಯಕ್ರಮವನ್ನು ರೂಪಿಸಿ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ರಾಜೇಂದ್ರ ಎಂ ಸಂಸ್ಥೆಯ ಸಮಗ್ರ ಪರಿಚಯವನ್ನು ವೇದಿಕೆಯಲ್ಲಿ ನಿವೇದಿಸಿದರು.

LEAVE A REPLY

Please enter your comment!
Please enter your name here