ನೂತನ ಬಸ್ ಸಂಚಾರಕ್ಕೆ ಚಾಲನೆ

0
230

ಬಳ್ಳಾರಿ / ಹೊಸಪೇಟೆ:ತಾಲ್ಲೂಕಿನ ಕಡ್ಡಿರಾಂಪುರ ಗ್ರಾಮದ ಹೊರವಲಯದಲ್ಲಿರುವ ಹಂಪಿ ವಿಜಯನಗರ ಪುನರ್ವಸತಿ ಕೇಂದ್ರಕ್ಕೆ ನೂತನ ಬಸ್ ಓಡಾಟಕ್ಕೆ ಹಂಪಿ ಕ್ಷೇತ್ರದ ಜಿಪಂ ಸದಸ್ಯ ಪ್ರವೀಣ್ ಸಿಂಗ್, ಶನಿವಾರ ಚಾಲನೆ ನೀಡಿದರು.

ಬಸ್ನಲ್ಲಿ ಕುಳಿತು ಸಂಚಾರ ಮಾಡುವ ಮೂಲಕ ಓಡಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಕಳೆದ 4 ವರ್ಷಗಳಿಂದ ಹಂಪಿ ವಿಜಯನಗರ ಪುನರ್ವಸತಿ ಕೇಂದ್ರಕ್ಕೆ ಬಸ್ ಸೌಲಭ್ಯ ಇಲ್ಲದೇ, ವಿದ್ಯಾರ್ಥಿಗಳು, ಸರಿಯಾದ ಸಮಯಕ್ಕೆ ಶಾಲಾ-ಕಾಲೇಜ್ಗೆ ಹಾಜರಾಗದೇ ತೊಂದರೆ ಅನುಭವಿಸುವಂತಾಗಿತ್ತು. ಹೀಗಾಗಿ ಸಾರಿಗೆ ಸಂಸ್ಥೆಯಿಂದ ನಿತ್ಯ 4 ಬಾರಿ ಬಸ್ ಸಂಚಾರ ಮಾಡಲಿದೆ. ಅಲ್ಲದೆ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾಹರಣೆಗಾಗಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಮುಂದಿನ ದಿನದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು. ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಎಲ್.ಸಿದ್ದನಗೌಡ, ತಾಪಂ ಸದಸ್ಯ ಪಾಲಪ್ಪ, ಹಂಪಿ ಗ್ರಾಮ ಉಪಾಧ್ಯಕ್ಷ ಗೋಪಿ, ಸದಸ್ಯ ಗೋವಿಂದ ನಾಯ್ಕ, ಗೋಪಾಲ ಮುಖಂಡರಾದ ಡಿ.ವೆಂಕಟರಮಣ, ಹನುಮಂತ ಬಾಟಿಯಾ, ವಿರೂಪಾಕ್ಷ, ಬಸವನಗೌಡ ಸೇರಿ ಇತರರು ಇದ್ದರು.
ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ರಥ ಬೀದಿಯ ಸಾಲು ಮಂಟಪದಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗಾಗಿ ಕಡ್ಡಿರಾಂಪುರ ಗ್ರಾಮದ ಬಳಿ ಸರ್ಕಾರ, ಪುನರ್ವಸತಿ ಕೇಂದ್ರವನ್ನು ನಿರ್ಮಿಸಿಕೊಟ್ಟಿತ್ತು. ಪುನರ್ವಸತಿ ಕೇಂದ್ರಕ್ಕೆ ಬಸ್ ಸೌಕರ್ಯ್ವಿಲ್ಲದೇ ಜನರು ಪರದಾಡುತ್ತಿದ್ದರು. ಸುಮಾರು 40ಕ್ಕೂ ಹೆಚ್ಚು ಶಾಲಾ-ಕಾಲೇಜ್ ವಿದ್ಯಾರ್ಥಿ ಹಾಗೂ ಇತರರು, ಬಸ್ಗಾಗಿ ಸುಮಾರು 1 ಕಿಮೀ ದೂರದ ದಾರಿ ಕ್ರಮಿಸಿ, ಬಸ್ನ್ನು ಹಿಡಿಯಬೇಕಾದ ಅನಿವಾರ್ಯಕತೆ ಇತ್ತು. ಇದನ್ನು ಮನಗಂಡ ಜಿಪಂ ಸದಸ್ಯ ಪ್ರವೀಣ್ಸಿಂಗ್, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಓಡಾಟಕ್ಕೆ ಕ್ರಮವಹಿಸಿದ್ದರು. ಈ ಹಿನ್ನಲೆಯಲ್ಲಿ ಸಾರಿಗೆ ಸಂಸ್ಥೆ, ಇಂದಿನಿಂದ ಬಸ್ ಓಡಾಟ ಆರಂಭಿಸಿದ್ದು, ಬೆಳಿಗ್ಗೆ 8ಗಂಟೆ, ಮದ್ಯಾನ್ಹ 12 ಗಂಟೆ, ಸಂಜೆ 4-30 ಹಾಗೂ ರಾತ್ರಿ 7-30 ಗಂಟೆಗೆ ಬಸ್ ಸಂಚಾರ ಮಾಡಲಿದೆ.

LEAVE A REPLY

Please enter your comment!
Please enter your name here