ನೂತನ ಬೀಟ್ ಪೊಲೀಸ್ ಸಭೆ..

0
241

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ ಚಿಂತಾಮಣಿ ತಾಲ್ಲೂಕು ನೂತನ ಬೀಟ್ ಪೊಲೀಸ್ ಸಭೆ ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅದೀಕ್ಷಕರಾದ ಐ.ಪಿ.ಎಸ್ ಶ್ರೀ ಕಾರ್ತಿಕ್ ರೆಡ್ಡಿ ರವರು ಉದ್ಘಾಟನೆ ಮಾಡಿದರು.

ಚಿಂತಾಮಣಿ ನಗರ ಮತ್ತು ಹೋಬಳಿ ಯಲ್ಲಿ ನೂತನ ಬೀಟ್ ಪೊಲೀಸ್ ಮಾಡುವುದರಿಂದ ಕಳ್ಳತನ, ದರೋಡೆ,ಗಲಾಟೆ, ಹಲವಾರು ಸಮಸ್ಯೆ ಗಳಿಗೆ ನಿವಾರಣೆ ಆಗುತ್ತದೆ. ಅದರ ಜೊತೆಗೆ ಸಾರ್ವಜನಿಕರು ಸಹಾ ಪೊಲೀಸರಿಗೆ ಸಾತ್ ನೀಡಬೇಕು ಎಂದು ಐ.ಪಿ.ಎಸ್ ಕಾರ್ತಿಕ್ ರೆಡ್ಡಿ ಹೇಳಿದರು.
ನಗರದಲ್ಲಿ ಮತ್ತು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೂತನವಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಪ್ರದೇಶಕ್ಕೆ ಒಬ್ಬ ಬೀಟ್ ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಸದಸ್ಯರಾಗಿ ಪೊಲೀಸರೊಂದಿಗೆ ಸಹಕರಿಸಿ ಎಂದು ಐ.ಪಿ.ಎಸ್‌. ಶ್ರೀ ಕಾರ್ತಿಕ್ ರೆಡ್ಡಿ ತಿಳಿಸಿದರು.

ಸಭೆ ಯಲ್ಲಿ ಮಾತನಾಡಿದ ಸಾರ್ವಜನಿಕರು ಚಿಂತಾಮಣಿ ನಗರದಲ್ಲಿ ಮಟ್ಕಾ ಆಡುವುದು ಕೆಲವು ಚಟುವಟಿಕೆ ಯಲ್ಲಿ ಭಾಗಿ ಆಗಿದ್ದಾರೆ, ಇದ್ದಕ್ಕೆಲ್ಲ ಪೊಲೀಸರು ಕಡಿವಾಣ ಹಾಕಬೇಕಾಗಿದೆ ಎಂದರು. ಮತ್ತು ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿ ಆಗಿದುರಿಂದ ಟ್ರಾಫಿಕ್ ಕಂಟ್ರೋಲ್ ಮಾಡಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ ಇನ್ನೂ ಆತ್ತಿಹೆಚ್ಚಿನ ಪೊಲೀಸರು ಚಿಂತಾಮಣಿಗೆ ಬೇಕಾಗಿದ್ದರೆ ಎಂದು ಸಭೆ ಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಡಿ,ವೈಎಸ್,ಪಿ ಪ್ರಭುಶಂಕರ್,ಚಿಂತಾಮಣಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ, ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಿ,ಪಿ,ಐ, ಅನಂದ ಕುಮಾರ್ ,ಕೆಂಚಾರ್ಲಹಳ್ಳಿ ಪೊಲೀಸ್ ಪಿ,ಎಸ್,ಐ ಅನಿಲ್ ಕುಮಾರ್, ಮತ್ತು ಬೀಟ್ ಪೊಲೀಸರು,ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಶಾಂತಮ್ಮವರದರಾಜ್, ತಾ ಪಂ ಉಪಾಧ್ಯಕ್ಷ ಶ್ರೀನಿವಾಸ್ ,ನಗರಸಭೆ ಉಪಾಧ್ಯಕ್ಷರು ಸುಜಾತಶಿವಣ್ಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀರಾಮಪ್ಪ,ಮತ್ತು ಸಾರ್ವಜನಿಕರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here