ನೂರಾರು ಮಹಿಳೆಯರು ಬಿಜೆಪಿಪಕ್ಷ ಸೇರ್ಪಡೆ

0
193

ಬಳ್ಳಾರಿ /ಹೊಸಪೇಟೆ:ಇಲ್ಲಿನ ಪಟೇಲನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಈಶ್ವರ್‌ಸಿಂಗ್ ನೇತೃತ್ವದಲ್ಲಿ ನೂರಾರು ಮಹಿಳೆಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಮಹಿಳೆಯರನ್ನು ಉದ್ದೇಶಿಸಿ ಕವಿತಾಸಿಂಗ್ ಮಾತನಾಡಿ, ಇಲ್ಲಿಗೆ ಆಗಮಿಸಿರುವ 190 ಬೂತ್‌ಗಳಲ್ಲಿನ ಮಹಿಳೆಯರು ಬಿಜೆಪಿ ಪಕ್ಷದ ತತ್ವ-ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಬಳಿಕ ಮಹಿಳೆಯರಿಗೆ ಶಾಲು ಹಾಕಿ ಸೇರ್ಪಡೆ ಮಾಡಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಸೋಮಶೇಖರರೆಡ್ಡಿ ಉದ್ಘಾಟಿಸಿದರು. ಮಾಜಿ ಶಾಸಕ ರತನ್‌ಸಿಂಗ್, ಮಂಡಲ ಅಧ್ಯಕ್ಷ ಸಂದೀಪಸಿಂಗ್, ಕಾರ್ಯದರ್ಶಿಗಳಾದ ಬಸವರಾಜ ನಲತ್ವಾಡ್, ಜೀವರತ್ನಂ, ತಿಮ್ಮಪ್ಪ ಯಾದವ್, ಜಗನ್, ತಾರಿಹಳ್ಳಿ ಆನಂದ್, ರವಿಕಾಂತ್, ಶ್ರೀಕಾಂತ್, ಶೇಕ್ಷಾವಲಿ, ಮಾಧವಿ, ಪರ್ವಿನ್, ಮುಮ್‌ತಾಜ್, ಹೇಮ, ಗಂಗಮ್ಮ, ಭಾರತಿ,ಇಂದುಮತಿ, ಸುಮಿತಾ ಗುಜ್ಜಲ್, ಶಾಲಿನಿ ಗೌಡ, ಸ್ವಾತಿ ಸಿಂಗ್, ಇದ್ದರು

LEAVE A REPLY

Please enter your comment!
Please enter your name here