ನೂಲು ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ

0
196

ಬಳ್ಳಾರಿ /ಹೊಸಪೇಟೆ:ನೂಲು ಹುಣ್ಣಿಮೆ ನಿಮಿತ್ತ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ರೇಷ್ಮೆ ನೂಲು ತೊಡಿಸಿ, ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ವಿದ್ಯಾರಣ್ಯ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಸಮ್ಮುಖದಲ್ಲಿ ದೇವಸ್ಥಾನದ ಆರ್ಚಕರು, ಸಂಪ್ರೋಕ್ಷಣಾ ಹೋಮ ನಡೆಸಿ, ವಿರೂಪಾಕ್ಷನಿಗೆ ರೇಷ್ಮೆ ನೂಲು ದಾರದಿಂದ ಅಲಂಕಾರ ಗೈದು, ಪಂಚಾಮೃತ, ರುದ್ರಾಭಿಷೇಕ ಹಾಗೂ ಸಹಸ್ರಾ ನಾಮ ವಳಿಯಿಂದ ವಿಶೇಷ ಪೂಜೆಯನ್ನು ನೆರವೇರಿಸಿದರು.

ಶ್ರಾವಣಮಾಸದ ಮೂರನೇ ಸೋಮವಾರ ವಿರೂಪಾಕ್ಷನಿಗೆ ನೂಲು ತೊಡಿಸಿ ಪೂಜೆ ಸಲ್ಲಿಸುವ ಆಚರಣೆ ವಿಜಯನಗರ ಅರಸರ ಕಾಲದಿಂದಲೂ ನಡೆಯುತ್ತಾ ಬಂದಿದೆ. ಐದು ದಿನಗಳ ಕಾಲ ವಿರೂಪಾಕ್ಷೇಶ್ವರ ಸ್ವಾಮಿ ಕೊರಳಲ್ಲಿರುವ ರೇಷ್ಮೆ ನೂಲ್‌ನ್ನು ಅಮಾವಾಸ್ಯೆ ಬಳಿಕ ಭಕ್ತರಿಗೆ ನೀಡಲಾಗುತ್ತದೆ. ನೂಲನ್ನು ಶ್ರದ್ಧಾ-ಭಕ್ತಿಯಿಂದ ರಕ್ಷಬಂಧವಾಗಿ ಕೈಗ ಕಟ್ಟಿಕೊಳ್ಳುತ್ತಾರೆ. ಬೆಳಿಗ್ಗೆನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿ ವಿರೂಪಾಕ್ಷೇಶ್ವರ ಹಾಗೂ ಪಂಪಾಂಭಿಕೆ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ಸಲ್ಲಿಸಿದರು.

ನೂಲ್ ಹುಣ್ಣಿಮೆ ಪ್ರಯುಕ್ತ ಹಂಪಿ ವಿದ್ಯಾರಣ್ಯ ಪೀಠಾದ ವಿದ್ಯಾರಣ್ಯ ಭಾರತಿ ಸ್ವಾಮಿಜಿಗಳು ವಿರೂಪಾಕ್ಷೇಶ್ವರ ಪ್ರಾಂಗಣದಲ್ಲಿರುವ ಗುಲಗುಂಜಿ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಚಂದ್ರಗ್ರಹಣ ನಿಮಿತ್ತವಾಗಿ ವಿರುಪಾಕ್ಷೇಶ್ವರ ದೇವಸ್ಥಾನ ಪ್ರವೇಶ ಸಮಯವನ್ನು ಮೊಟಕುಗೊಳಿಸಿ, ಸಂಜೆ 6-30ಕ್ಕೆ ಪ್ರವೇಶ ದ್ವಾರವನ್ನು ಮುಚ್ಚಲಾಯಿತು. ವಾಡಿಕೆಯಂತೆ 8 ಗಂಟೆ ಬದಲಿಗೆ ಚಂದ್ರಗ್ರಹಣದ ಹಿನ್ನಲೆಯಲ್ಲಿ ಶೀಘ್ರವೇ ದೇವಸ್ಥಾನದಲ್ಲಿ ಎಲ್ಲಾ ಪೂಜಾ ವಿಧಿ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಯಿತು.

LEAVE A REPLY

Please enter your comment!
Please enter your name here