ನೂಲು ಹುಣ್ಣಿಮೆ ಹಿನ್ನೆಲೆ,ರಕ್ಷಾ ಬಂಧನ ಹಬ್ಬ ಆಚರಣ

0
223

ಬಳ್ಳಾರಿ:ನೂಲು ಹುಣ್ಣಿಮೆ ಹಿನ್ನೆಲೆ-ರಕ್ಷಾ ಬಂಧನ ಹಬ್ನ ಆಚರಣೆ-ಸಹೋದರಿಯರಿಂದ ಸಂಸದ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಗೆ ರಕ್ಷಾ ಬಂಧನ-ಸಿಹಿ ತಿನ್ನಿಸಿ ಶುಭ ಹಾರೈಸಿದ ಸೋದರಿಯರು

ಸಂಪ್ರದಾಯದಂತೆ ನೂಲು ಹುಣ್ಣಿಮೆ ನಿಮಿತ್ತ ಬಳ್ಳಾರಿಯಲ್ಲಿ ರಕ್ಷಾ ಬಂಧನ ಹಬ್ನವನ್ನು ಆಚರಿಸಲಾಯಿತು.
ಸಹೋದರ ಮತ್ತು ಸಹೋದರಿಯರ ಬೆಸುಗೆ ಬೆಸೆಯುವ ಈ ನೂಲು ಹುಣ್ಣಿಮೆ ನಿಮಿತ್ತ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳಾದ ಅಲವೇಲು, ಸುನೀತಾ ಮೊದಲಾದ ಸಹೋದರಿಯರು ರಕ್ಷಾ ಬಂಧನ ಹಬ್ಬ ಆಚರಿಸಿ, ಸಿಹಿ ವಿತರಿಸಿ ಸಂಪ್ರದಾಯ ಮುಂದುವರಿಸಿದರು.
ಬಳ್ಳಾರಿ ಸಂಸದರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ಶ್ರೀರಾಮುಲು, ಕೆಎಂಎಫ್ ಮಾಜಿ ರಾಜ್ಯಾಧ್ಯಕ್ಷ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಬಿಜೆಪಿ ಮುಖಂಡರಾದ ಓಬಳೇಶ್ ಮತ್ತು ಇತರರಿಗೆ ರಾಖಿ ಕಟ್ಟುವ ಮೂಲಕ ಸಹೋದರತೆ ಬಿಂಬಿಸುವ ಹಬ್ಬದ ಸಡಗರ, ಸಂಭ್ರಮ ಆಚರಿಸಿದ್ರು.

LEAVE A REPLY

Please enter your comment!
Please enter your name here