ನೆತ್ತಿಗೊಂದು ಸೂರು, ಕೃಷಿಗೆ ಭೂಮಿಗಾಗಿ ಧರಣಿ.

0
115

ಬೆಂಗಳೂರು/ಕೆ.ಆರ್.ಪುರ:- ಸುಮಾರು ವರ್ಷಗಳಿಂದ ಬಡ ಜನರು ವಾಸಮಾಡಲು ಸ್ವಂತ ನಿವೇಶನವಿಲ್ಲದೆ ಸಕರ್ಾರಕ್ಕೆ ಅಜರ್ಿ ಸಲ್ಲಿಸಿದರೂ ಯಾವುದೆ ಸಕರ್ಾರಿ ಜಾಗವಿಲ್ಲ ಎಂದು ಸಕರ್ಾರಿ ಅಧಿಕಾರಿಗಳ ಮೂಲಕ ತಿಳಿಸುತ್ತಿರುವ ಸಕರ್ಾರಗಳು ಬೂಗಳ್ಳರಿಗೆ ಅದೆ ಸಕರ್ಾರಿ ಜಾಗಗಳನ್ನು ಮಂಜೂರಿ ಮಾಡುತ್ತಾರೆ ಎಂದು ಕನರ್ಾಟಕ ಜನಾಂದೋಲನಾ ಸಂಘಟನೆಯ ರಾಜ್ಯಾದ್ಯಕ್ಷ ಕೆ.ಮರಿಯಪ್ಪ ಆರೋಪಿಸಿದರು.
ಇಲ್ಲಿನ ತಾಲ್ಲುಕು ಕಛೇರಿ ಮುಂದೆ ಕನರ್ಾಟಕ ಜನಾಂದೋಲ ಸಂಘಟನೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೆತ್ತಿಗೊಂದು ಸೂರು, ಕೃಷಿಗೊಂದು ಭೂಮಿ ನೀಡುವಂತೆ ಒತ್ತಾಯಿಸಿ ರ್ಯಾಲಿ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಸುಮಾರು ಬಡ ಕುಟುಂಬಗಳು ಕೂಲಿಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಂತಹವರಿಗೆ ನಿವೇಶನ ನೀಡಲು ಕೋರಿ ನಮ್ಮ ಸಂಘಟನೆ ವತಿಯಿಂದ ಹೋರಾಟ ಮಾಡುತ್ತಾ ಬಂದರೂ ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸದಿರುವುದು ನಮ್ಮೆಲ್ಲರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಬೆಂಗಳೂರು ಪೂರ್ವ ತಾಲ್ಲುಕು ಬಿದರಹಳ್ಳಿಯ ಸವರ್ೆ ನಂ. 193 ರಲ್ಲಿ 20 ಎಕರೆ ಜಾಗವನ್ನು ಆಶ್ರಯ ಯೋಜನೆಗೆ ನೀಡಿ ಸ್ಥಳೀಯರಿಗೆ ಹಕ್ಕು ಪತ್ರ ನೀಡಬೇಕಾಗಿದೆ. ಅದರಂತೆ ಬೆಂಗಳೂರು ಪೂರ್ವ ತಾಲ್ಲುಕಿನಲ್ಲಿ ಸುಮಾರು ಎಕರೆ ಸಕರ್ಾರಿ ಜಾಗವಿದ್ದರೂ ಬಡವರಿಗೆ ನಿವೇಶನ ನೀಡಲು ಅಧಿಕಾರಿಗಳು ಹಿಂದೆ ಸರಿಯುತ್ತಿದ್ದಾರೆ ಎಂದರು. ಅಲ್ಲದೆ ಸಕರ್ಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅಜರ್ಿ ಸಲ್ಲಿಸಿರುವವರಿಗೆ ಹಕ್ಕು ಪತ್ರ ಇನ್ನೂ ನೀಡಿಲ್ಲ, ಇನ್ನೂ ಹಲವಾರು ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ತಾಲ್ಲೂಕು ಕಛೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ನಂದೀಶ್ರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಕನರ್ಾಟಕ ಜನಾಂದೋಲನ ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ  ನೆತ್ತಿಗೊಂದು ಸೂರು ಪ್ರತಿಭಟನೆಯಲ್ಲಿ ತಾವು ಭಾಗವಹಿಸಿ ಬಡವರಿಗೆ ನ್ಯಾಯ ದೊರಕಿಸುವ ಬರವಸೆ ನೀಡಿದರು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಸಕರ್ಾರಿ ಜಾಗಗಳನ್ನು ಗುರಿತಿಸಿ ನಮ್ಮ ಸಕರ್ಾರದ ಅವದಿಯಲ್ಲಿ ಸುಮಾರು 2500 ಮನೆಗಳನ್ನು ಕಟ್ಟಿಸಿ ನಿವೇಶನ ರಹಿತರಿಗೆ ನೀಡಲಾಗಿದೆ ಎಂದರು. ಕಲ್ಕೆರೆ ಗ್ರಾಮದ ಸವರ್ೆ ನಂ. 389 ರಲ್ಲಿ 3.1 ಎಕರೆ ಸಕರ್ಾರಿ ಜಾಗವಿದ್ದರೂ ಬಡವರಿಗೆ ಹಂಚದೆ ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಶೀಗೇಹಳ್ಳಿ ಸವರ್ೆ ನಂ. 118 ಸಕರ್ಾರಿ ಜಾಗವನ್ನು ಬಡವರಿಗೆ ನೀಡದೆ ಹಣ ಪಡೆದು ಭೂಗಳ್ಳರಿಗೆ ನೀಡಲಾಗಿದೆ ಎಂದರು. ಕ್ಷೇತ್ರದ ಶಾಸಕರು ಬಡವರ ಮೇಲೆ ಕಾಳಜಿ ಇದ್ದರೆ ಅವರಿಗೆ ವಾಸಿಸಲು ಸ್ವಂತ ನಿವೇಶನ ಒದಗಿಸುತ್ತಿದ್ದರು ಎಂದು ಆರೋಪಿಸಿದರು.
ಈ ಸಂದರ್ಬದಲ್ಲಿ ಕನರ್ಾಟಕ ಜನಾಂದೋಲನ ಸಂಘಟನೆ ರಾಜ್ಯ ಉಪಾದ್ಯಕ್ಷ ಗುಣಶೇಖರ್, ಪಾಲಿಕೆ ಸದಸ್ಯರಾದ ಬಂಡೆ ರಾಜಣ್ಣ, ಪದ್ಮಾವತಿ ಶ್ರೀನಿವಾಸ್, ಸಂಘಟನೆ ಪದಾಧಿ ಕಾರಿಗಳಾದ ವೆಂಕಟೇಶ್, ರಾಮಸ್ವಾಮಿ, ಶಿವಪ್ಪ, ದೇವರಾಜು, ನಾರಾಯಣಸ್ವಾಮಿ, ಕೃಷ್ಣಪ್ಪ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here