ನೇಕಾರರ ಸಾಲ ಮನ್ನಾಮಾಡುವಂತೆ ಒತ್ತಾಯ

0
491

ನೇಕಾರರ ಸಾಲ ಮನ್ನಾಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಒತ್ತಾಯ

ಬಾಗಲಕೋಟೆ/ಹುನಗುಂದ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ನೇಕಾರ ಮತ್ತು ಮೀನುಗಾರರ ಸಾಲ ಮನ್ನಾ ಮಾಡುವಂತೆ ಸುದ್ದಿಗೊಷ್ಠಿಯಲ್ಲಿ ಒತ್ತಾಯಿಸಿದ್ರು.ಸಿಎಂ ಸಿದ್ದರಾಮಯ್ಯ ಬಿಜೆಪಿಯವರ ಹೋರಾಟಕ್ಕೆ ಮನಿದು ಎಚ್ಚರಗೊಂಡು ರೈತರ 50ಸಾವಿರ ಸಾಲ ಮನ್ನಾ ಮಾಡಿದ್ದು ರಾಜಕೀಯ ಗಿಮಿಕ್ಕು.ಸಿಎಂಗೆ ರೈತರ ಪರ ಕಾಳಜಿಯಿದ್ರೆ ಅಲ್ಪಾವದಿ ಮತ್ತು ದೀರ್ಘಾವಧಿಯ ಸಾಲವನ್ನ 1ಲಕ್ಷದ ವರೆಗೆ ಮನ್ನಾ ಮಾಡಲಿ ಎಂದ್ರು.ಬರೀ ರಾಜಕೀಯ ಉಳಿವಿಗಾಗಿ ಕೋ-ಆಪರೆಟಿವ್ ಗಳಲ್ಲಿನ ಸಾಲ ಮನ್ನಾ ಮಾಡಿದ್ರೆ ಸಾಲದು ಎಂದು ಆರೋಪಿಸಿದ್ರು.

ಇನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ವರ್ಗವಿದೆ,ಅವರು ಕಷ್ಟದ ಜೀವನ ಸಾಗಿಸುತ್ತಿದ್ದಾರೆ.ಸರ್ಕಾರ ನೇಕಾರರನ್ನ ಮರೆತಿದೆ ಎಂದ ಅವರು ರೈತರ, ನೇಕಾರ ಮತ್ತು ಮೀನುಗಾರರ 1ಲಕ್ಷದವರೆಗಿನ ದಿರ್ಘಾವದಿ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೆವೆ ಎಂದು ಹುನಗುಂದ್ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ರು.

LEAVE A REPLY

Please enter your comment!
Please enter your name here