ನೇಣು ಬಿಗಿದು ಆತ್ಮಹತ್ಯೆ.

0
155

ಮಂಡ್ಯ/ಮಳವಳ್ಳಿ: ಸಾಲಬಾದೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ.ಮಳವಳ್ಳಿ ತಾಲ್ಲೂಕಿನ ಕಸಬಾ ಹೋಬಳಿ ಅಂಕನಹಳ್ಳಿ ಗ್ರಾಮದ ಸುರೇಶ(35) ಮೃತಪಟ್ಟ ರೈತ.ಈತ ಹೆಸರಿನಲ್ಲಿ 21 ಗುಂಟೆ ಹಾಗೂ ತಾಯಿ ಚೌಡಮ್ಮರವರ ಹೆಸರಿನಲ್ಲಿ 2 ಎಕರೆ ಜಮೀನಿವಿದ್ದು ಈಗಾಗಲೇ 3 ಬೋರ್ ವೇಲ್ ಕೊರಿಸಿ,ವಿಫಲನಾಗಿದ್ದು ಸೋಸಟಿ ಚಿನ್ನ ಅಡವಿಟ್ಟು 50 ಸಾವಿರ, ಸ್ವಸಹಾಯ ಸಂಘದಲ್ಲಿ ಸುಮಾರು 2 ಲಕ್ಷ ,ಕೈ ಸಾಲ ಸೇರಿದಂತೆ 4 ಲಕ್ಷರೂ ಸಾಲ ಮಾಡಿದ್ದ ಎನ್ನಲಾಗಿದೆ . ,ಕಬ್ಬು .ಭತ್ತ, ಹಾಕುತ್ತಿದ್ದ ಈ ಬಾರಿ ಮಳೆ ಇಲ್ಲದೆ ಕಂಗಾಲಾಗಿದ್ದ ಎನ್ನಲಾಗಿದೆ . ಮೃತ ಸುರೇಶ್ ಕಳೆದ ರಾತ್ರಿ ಮನೆಯಿಂದ ಹೊರಟು ಮನೆಗೆ ಬೆಳಿಗ್ಗೆಯಾದರೂ ಮನೆಗೆ ಬಾರದ ಕಾರಣ ಜಮೀನಿನಲ್ಲಿ ಬಂದು ನೋಡಿದಾಗ ಮರಯೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ ಸ್ಥಳಕ್ಕೆ ಗ್ರಾಮಾಂತರ ಸರ್ಕಲ್ ಇನ್ ಪೆಕ್ಟರ್ ಶ್ರೀಕಾಂತ್ ಬೇಟಿ ನೀಡಿ, ಈ ಸಂಬಂಧ ಗ್ರಾಮಾಂತರ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ..

LEAVE A REPLY

Please enter your comment!
Please enter your name here