ನೇಪಾಳಿ ಯುವತಿ ಮೇಲೆ ಗ್ಯಾಂಗ್ ರೇಪ್

0
158

ಬೆಂಗಳೂರು: ಆರು ಯುವಕರ ಗುಂಪೊಂದು ನೇಪಾಳಿ ಯುವತಿ ಮೇಲೆ ಅತ್ಯಾಚಾರವೆಸಗಿ, ಕೊನೆಯಲ್ಲಿ ಯುವತಿ ಕಾಲಿನ ಮೇಲೆ ಕಲ್ಲೇತಾಕಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅವಡ ದೇನಹಳ್ಳಿಯಲ್ಲಿ ನಡೆದಿದೆ, ಆನೇಕಲ್ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಅವಡದೆನಹಳ್ಳಿಯ ಪಾಳು ಮನೆಯೊಂದರಲ್ಲಿ ಆರು ಜನ ಕಿಡಿಗೇಡಿ ಗಳು ಯುವತಿಯನ್ನು ಅಪಹರಿಸಿ ಇಲ್ಲಿನ ಪಾಳು ಮನೆಗೆ ಎಳೆದು ತಂದು ಸಾಮೂಹಿಕ ಅತ್ಯಾಚಾರ ವೆಸಗಿ, ಇಂದು ಮುಂಜಾನೆ ಹೊರ ಹೋಗುವಾಗ ಯುವತಿಯ ಕಾಲಿನ ಮೇಲೆ ಸೈಜುಗಲ್ಲು ಹಾಕಿ‌ ಪರಾರಿಯಾಗಿದ್ದಾರೆ. ನೋವಿನಿಂದ ಕಿರುಚಿ ಕೊಂಡು ರಸ್ತೆಗೆ ಬಂದ ಯುವತಿಯನ್ನು ಕಂಡ ಎನ್,ಜಿ,ಓ, ಒಂದರ ಕಾರ್ಯಕರ್ತರಾದ ಪಾರಿಜಾತ ಮತ್ತು ಶಂಕರ್ ಕೂಡಲೇ 108 ಅಂಬ್ಯುಲೆನ್ಸ್ ಮುಂಖಾಂತರ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂದ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾಮುಖರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here