ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳಿಗೆ ಬಾರಿ ಬೇಡಿಕೆ

0
173

ಬಳ್ಳಾರಿ /ಹೊಸಪೇಟೆ :ಕಮಲಾಪುರ ದೇಶಾದ್ಯಂತ ಶುಕ್ರವಾರದಂದು ಗಣೇಶ ಉತ್ಸವ ಆಚರಿಸುತ್ತಿರುವ ನಿಟ್ಟಿನಲ್ಲಿ ನಗರದ ವಿವಿದಕಡೆ ಸಿಗುತ್ತಿರುವ ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.

ನೆರೆಯ ಆಂದ್ರ ಪ್ರದೇಶದ ಅನಂತಪುರ, ಗುಂತಕಲ್ ಸೇರಿದಂತೆ ವಿವಿಧ ಹಳ್ಳಿಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿ ಖರೀದಿಗೆ ಮುಗಿ ಬಿದ್ದಿದ್ದಾರೆ. ನಗರದ ವಾಲ್ಮೀಕಿ ವೃತ್ತ, ರಾಮ ಟಾಕೀಸ್, ಆರ್.ಟಿ.ಓ. ಕಛೇರಿ, ಬಸುವ ಕಾಲುವೆ ಬಳಿ ಸಿಗುತ್ತಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಗಳಿಗೆ ಬಾರಿ ಬೇಡಿಕೆ ಬಂದಿದೆ.
ಇದಲ್ಲದೆ ಕಲ್ಕತ್ತ ರಾಜ್ಯದ ಕಲವಿದರು ನಗರದೆಲ್ಲೆಡೆ ಬೀಡು ಬಿಟ್ಟು ಬೃಹತ್ ನೈಸರ್ಗಿಕ ಗಣೇಶ ಮೂರ್ತಿಗಳನ್ನು ತಯಾರಿಯಲ್ಲಿ ತಲ್ಲೀನರಾಗಿದ್ದಾರೆ. ನೆರೆಯ ಆಂದ್ರ ಪ್ರದೇಶದ ಅನಂತಪುರ, ಗುಂತಕಲ್ ಪ್ರದೇಶದ ಸಾರ್ವಜನಿಕರು ಹೊಸಪೇಟೆಗೆ ಆಗಮಿಸಿ ಬೃಹತ್ ಮೂರ್ತಿಗಳಿಗೆ ಬೇಡಿಕೆ ಇಟ್ಟಿರುವುದರಿಂದ ವ್ಯಾಪರಿಗಳಲ್ಲಿ ಸಂತಸ ಮೂಡಿದೆ.
ಒಟ್ಟಾರೆ ಈ ಭಾರಿ ಸರ್ಕಾರದವರು ಪಿ.ಓ.ಪಿ ಗಣೇಶ ಮೂರ್ತಿಗೆ ನಿಷೇದ ಏರಿರುವುದರಿಂದ ನೈಸರ್ಗಿಕ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಈ ಹಿನ್ನಲೆಯಲ್ಲಿ ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಆರ್ಥಿಕ ಪರಿಸ್ಥಿತಿ ಅಲ್ಪ ಮಟ್ಟಿಗೆ ಸುದಾರಿಸಿದಂತಾಗಿದ್ದು ಕಲಾವಿದರಿಗೆ ಆರ್ಥಿಕ ನೆರವು ಸಿಕ್ಕಿದೆ. ಬೃಹತ್ ಮೂರ್ತಿಗಳನ್ನು ಸಾರ್ವಜನಿಕರು ತಮ್ಮ ವಾಹನದಲ್ಲಿ ಲೋಡ್ ಮಾಡಲು ಕ್ರೇನ್‍ಗಳನ್ನು ಬಳಸಲಾಗುತ್ತಿರುವುದರಿಂದ ಕಾರ್ಮಿಕರ ಶ್ರಮಕ್ಕೂ ವಿಶ್ರಾಂತಿ ದೊರೆತಂತಿದೆ.

LEAVE A REPLY

Please enter your comment!
Please enter your name here