ನೊರೆಯ ಕೆರೆ “ಕಾಂಗ್ರೆಸ್ ಕೆರೆ”ನಾ..?

0
185

ಬೆಳ್ಳಂದೂರು ಕೆರೆ ಉಳಿವಿಗಾಗಿ ವಿಭಿನ್ನ ರೀತಿಯ ಪ್ರತಿಭಟನೆ, ಕಾಂಗ್ರೆಸ್ ಕೆರೆ ಎಂದು ನಾಮಕರಣ.

ಬೆಂಗಳೂರು/ಮಹದೇವಪುರ:- ಬೆಂಗಳೂರಿನ ಕೆರೆಗಳಲ್ಲಿ ಒಂದಾದ ಬೆಳ್ಳಂದೂರು ಕೆರೆ ನೊರೆ ಹಾಗೂ ಬೆಂಕಿ ಸಮಸ್ಯೆಯಿಂದ ಭಾರಿ ಸುದ್ದಿಯಾಗಿ ಬೆಂಗಳೂರಿನ ಮಾನ ಮಯರ್ಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾದರು ಕೆರೆ ಅಭಿವೃದ್ದಿಗೆ ಮುಂದಾಗದ ಕಾಂಗ್ರೆಸ್ ಸರ್ಕಾರದ ಹೆಸರನ್ನು ಬೆಳ್ಳಂದೂರು ಕೆರೆ ನಾಮಕರಣ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಆಗಿದ್ದರೆ ಇಂತಹ ವಿನೂತನ ಪ್ರತಿಭಟನೆ ನಡೆಸಿದವರಾದರು ಯಾರು, ಎಲ್ಲಿ ಎಂಬುದನ್ನು ನೋಡಿ ಬರೋಣ ಬನ್ನಿ.

ಇದೇನಪ್ಪ ಬೆಳ್ಳಂದೂರು ಕೆರೆಯನ್ನು ತೋರಿಸಿ ಕಾಂಗ್ರೆಸ್ ಕೆರೆ ಎಂದು ಹೇಳುತ್ತಿದ್ದಾರೆಂದು ಆಶ್ಚರ್ಯವಾಗುತ್ತಿದೆಯೆ. ಹೌದು ಇಂದಿನಿಂದ ಬೆಳ್ಳಂದೂರು ಕೆರೆಗೆ ಕಾಂಗ್ರೆಸ್ ಕೆರೆ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬೆಳ್ಳಂದೂರು ಕೆರೆಯಲ್ಲಿ ನೊರೆ ತಾಂಡವವಾಡುತ್ತಿದ್ದು ಜನರು ನರಕ ಯಾತನ ಅನುಭವಿಸುತ್ತಿದ್ದಾರೆ. ಹಲವು ಭಾರಿ ಪ್ರತಿಭಟನೆ ನಡೆಸಿದರು ಇದಕ್ಕೆ ಪರಿಹಾರ ಕಲ್ಪಿಸದೆ ಕಾಂಗ್ರೆಸ್ ಸರ್ಕಾರ ಇಲ್ಲಿನ ಜನರಿಗೆ ನೊರೆ ಭಾಗ್ಯ ಕಲ್ಪಿಸಿದೆ ಎಂದು ಈ ಕೆರೆಗೆ “ಕಾಂಗ್ರೆಸ್ ಕೆರೆ” ಎಂದು ನಾಮಕರಣ ಮಾಡಲಾಗಿದೆ. ನವ ಭಾರತ ಪ್ರಜಾಸತ್ತಾತ್ಮಕ ಪಕ್ಷ ಹೋರಾಟದ ರೀತಿಯಲ್ಲಿ ಈನಾಮಕರಣ ಮಹೋತ್ಸವವನ್ನು ಆಯೋಜಿಸಿದ್ದು, ನಾಮಕರಣ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಮಹದೇವಪುರ ಶಾಸಕ ಅರವಿಂದ ಲಿಂಭಾವಗಳಿ(ಮುಸುಕುದಾರಿಗಳು) ಭಾಗವಹಿಸಿದ್ದು ವಿಶೇಷವಾಗಿತ್ತು.

 

ಬೈಟ್: ಅನಿಲ್ ಶೆಟ್ಟಿ, ರಾಷ್ಟ್ರೀಯ ಅಧ್ಯಕ್ಷ(ಪ್ರಜಾಸತ್ತಾತ್ಮಕ ಪಕ್ಷ)

 

ಇನ್ನು ಹಸಿರು ನ್ಯಾಯ ಪೀಠ ಈ ಕೆರೆಯನ್ನು ಅಭಿವರದ್ದಿ ಪಡಿಸುವಂತೆ ಸಕರ್ಾರಕ್ಕೆ ಚಾಟಿ ಬೀಸಿದರು ನಿದ್ದೆಯಿಂದ ಮೇಲೆಳದ ಸರ್ಕಾರ ಕಾಟಾಚಾರಕ್ಕೆ ಮೂರು ಬೋಟ್ಗಳಲ್ಲಿ ಕಳೆ ಹಾಗೂ ಕೆರೆಯ ಊಳನ್ನು ತೆಗೆದು ಅಭಿವೃದ್ದಿ ಪಡಿಸುತ್ತೇವೆಂದು ಕಾರ್ಯಾಚರಣೆಗೆ ಇಳಿದು ಮೂರೆ ದಿನದಲ್ಲಿ ಸುಮ್ಮನಾಗಿದ್ದಾರೆ. ಕಳೆದ ವಾರದಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮತ್ತೆ ಬೆಳ್ಳಂದೂರು ಹಾಗೂ ವತರ್ೂರು ಕೆರೆ ಕೋಡಿಗಳಲ್ಲಿ ನೊರೆಯ ಪರ್ವತ ಉಂಟಾಗಿ ವಾಹನ ಸವಾರರು ಹಾಗೂ ಸ್ಥಳಿಯರು ಸಾಂಕ್ರಾಮಿಕ ರೋಗಗಳು ಸೇರಿದಂತೆ ಹಲವು ಸಮಸ್ಯೆಗಳಿಂದ ಆಸ್ಪತ್ರೆಗಳ ಪಾಲಾಗುವಂತಾಗಿದೆ. ಇದರಿಂದಾಗಿ ನೊರೆ ಭಾಗ್ಯ ನೀಡಿರುವ ರಾಜ್ಯ ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ ನಡೆಸಿ ಅಭಿವೃದ್ದಿ ಪಡಿಸುವಂತೆ ಸಾರ್ವಕನಿಕರು ಆಗ್ರಹಿಸಿದ್ದಾರೆ.

ಒಟ್ಟಾರೆ ಬೆಳ್ಳಂದೂರು ಕೆರೆ ಅಭಿವೃದ್ದಿ ಪಡಿಸುವಂತೆ ಹಸಿರು ನ್ಯಾಯ ಪೀಠ ರಾಜ್ಯ ಸರ್ಕಾರದ ವಿರುದ್ದ ಚಾಟಿ ಬೀಸಿದರು ಅಭಿವೃದ್ದಿಗೆ ಮುಂದಾಗ ಸರ್ಕಾರ ಜನರ ಕಣ್ಣೋರೆಸಿ ಸುಮ್ಮನಾಗಿದ್ದು, ಇದೀಗ ಕಾಂಗ್ರೆಸ್ ಕೆರೆ ಎಂದು ನಾಮಕರಣ ಮಾಡಿರುವುದರಿಂದ ಇದು ನಮ್ಮ ಕೆರೆಯೆಂದು ತಿಳಿದು ಕೆರೆಯನ್ನು ಅಭಿವೃದ್ದಿ ಪಡಿಸಿ, ನೊರೆ ಭಾಗ್ಯದಿಂದ ಸಾರ್ವಜನಿಕರಿಗೆ ಮುಕ್ತಿ ಕಲ್ಪಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here