ನೋಟ್ ಬ್ಯಾನ್ ರಿಯಾಕ್ಷನ್..?

0
107

ತುಮಕೂರು: ನೋಟ್ ಬ್ಯಾನ್ ನವೆಂಬರ್ ೮ ಕ್ಕೆ ಒಂದು ವರ್ಷ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದ ಅವದಿಯಲ್ಲಿ ದೇಶದ ಸಾಮಾನ್ಯ ಜನತೆ ಅನುಭವಿಸಿದ ನೋವು ಆತಂಕ ಪರದಾಟ ಬಿಟ್ಟರೆ ಯಾವುದೇ ಅನುಕೂಲ ಆಗಿಲ್ಲ.
ಹಲವು ರೀತಿಯಲ್ಲಿ ತೊಂದರೆ ಅನುಭವಿಸಿದ್ದು ಬಿಟ್ಟರೆ ಕಿಂಚಿತತ್ತು ಒಳಿತಾಗಿಲ್ಲ.
ನರೇಂದ್ರ ಮೋದಿ ಯವರ ಅವೈಜ್ಞಾನಿಕ ಅಪ ನಗದಿಕರಣದ ಬ್ಯಾಂಕುಗಳು ಮತ್ತು ಕಾರ್ಪೋರೆಟ್ ಕಂಪನಿಗಳಿಗೆ ಇದರಿಂದ ಲಾಭವಾಗಿದ್ದುಬಿಟ್ಟರೆ ಇಂದಿಗೂ ಕೂಲಿ ಕಾರ್ಮಿಕರು ಮದ್ಯಮ ಜನತೆ ಸಾಮಾನ್ಯರು ಅದರಿಂದ ಭೀಕರ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಇಂತಹ ನಿಕೃಷ್ಟ ಪರಿಸ್ಥಿತಿಯಲ್ಲಿ ದೇಶವನ್ನು ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನ ಅಡ ಇಡುವಷ್ಟರ ಮಟ್ಟಿಗೆ ಕೊಂಡೊಯ್ದು ಕುಖ್ಯಾತಿ ಪ್ರಧಾನಿಯವರದ್ದು.
ನೂರು ದಿನದಲ್ಲಿ ಕಪ್ಪು ಹಣ ತರುವುದಾಗಿ ಬಾಯಿ ಬಡಿದು ಕೊಂಡಿದ್ದರು ಮೊದಿ ಆದರಿನ್ನು ಕಪ್ಪು ಹ ಬರಲಿಲ್ಲ,ಕೋಮುವಾದ ಸೃಷ್ಟಿ, ಭಯೋತ್ಪಾದನೆ ನಿಗ್ರಹ ಕಾರ್ಯ ಆಗಲಿಲ್ಲ,ಹೀಗೆ ಸುಳ್ಳಿನ ಸರಮಾಲೆಗಳೆ ಕೇಂದ್ರ ಸರ್ಕಾರವು ಎಲ್ಲಾ ಯೋಜನೆಗಳು ಉಲ್ಟಾ ಆಗಿವೆ ಇದು ರಾಷ್ಟ್ರದ ಸಾಮಾನ್ಯರಿಗೆ ಮಾರಕವಾಗಿವೆ .

LEAVE A REPLY

Please enter your comment!
Please enter your name here