ನೋಟ್ ಬ್ಯಾನ್ ವಿರೋಧಿಸಿ-ಕರಾಳ ದಿನಾಚರಣೆ..

0
243

ಬಳ್ಳಾರಿ/ಹೊಸಪೇಟೆ:ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿಂದು ಕಪ್ಪು ಪಟ್ಟಿ ಧರಿಸುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿದರು.ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ರೋಟರಿ ವೃತ್ತದಲ್ಲಿ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸ್ಥಳೀಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮುರಳಿಧರ್ ಯಾಕ್ಲರ್ ಕರ್, ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ್ದರಿಂದ, ದೇಶದ ಜನಸಾಮಾನ್ಯರು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಯಿತು. ಇದೊಂದು ಕೇಂದ್ರ ಸರ್ಕಾರದ ಆತುರದ ಹಾಗೂ ಆವೈಜ್ಞಾನಿಕ ಕ್ರಮವಾಗಿದೆ. ಇದನ್ನು ಪ್ರತಿಭಟಿಸಿ, ಕಾಂಗ್ರೆಸ್ ದೇಶದಾದ್ಯಂತ ಕರಾಳ ದಿನವನ್ನು ಆಚರಿಸುತ್ತಿದೆ ಎಂದರು.ಮುಖಂಡ ಗುಜ್ಜಲ ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರದ ನೋಟ್ ಬ್ಯಾನ್ ವಿರೋಧಿಸಿ, ಕೆಪಿಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ದೇಶದಾದ್ಯಂತ ಇಂದು ಕರಾಳ ದಿನವನ್ನು ಆಚರಿಸುತ್ತಿದೆ ಎಂದರು.ನಂತರ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರೊಫೆಷನಲ್ ಸೆಲ್ ನ ಹೈದ್ರಾಬಾದ್-ಕರ್ನಾಟಕದ ಉಸ್ತುವಾರಿ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಬಾಗುವಾನ್ ಫಹಿಂ ಬಾಷ, ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯಾಳಿ ತಿಮ್ಮಪ್ಪ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಚಾಲಕ ಆರ್.ಚೇತನ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ವೆಂಕಟರಮಣ, ತಾರಿಹಳ್ಳಿ ಶಿವಮೂರ್ತಿ, ಮುಖಂಡರಾದ ದೀಪಕ್ ಕುಮಾರ್ ಸಿಂಗ್, ಡಾ.ತಾರಿಹಳ್ಳಿ ವೆಂಕಟೇಶ್, ನಿಂಬಗಲ್ ರಾಮಕೃಷ್ಣ, ಲಿಯಾಕತ್ ಅಲಿ, ತಾರಿಹಳ್ಳಿ ಜಂಬಯ್ಯ, ಬಂಡೆ ಮರಿಸ್ವಾಮಿ, ರಜಿಯಾ ಬೇಗಂ, ಮಾಬುನ್ನಿ, ಎಂ.ಸಿ.ವೀರಸ್ವಾಮಿ, ಯಂಕಪ್ಪ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here