ನ್ಯಾಯ ಬೆಲೆ ಅಂಗಡಿಯ ಅಡ್ಡದಾರಿ ವಸೂಲಿ

1
664

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದಲ್ಲಿ ನೆಕುಂದಿಪೇಟೆಯ ಡಿಪೋ ನಂ 15,ಮತ್ತು111ರ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ವೇಳೆ ಸಾರ್ವಜನಿಕರಿಗೆ ವಂಚನೆ ಮಾಡಿ ಅಡ್ಡದಾರೀಲಿ ವಸೂಲಿಗಿಲಿದ ಪಡಿತರ ವಿತರಕರ ಅಸಲೀಯತ್ತಿನ ದೃಶ್ಯಾವಳಿಗಳು ಇಲ್ಲಿವೆ ನೋಡಿ.

ಸರ್ಕಾರ ಏಪ್ರಿಲ್‌ ತಿಂಗಳಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿ ಉಚಿತವಾಗಿ ವಿತರಣೆ ಮಾಡಲು ಆದೇಶ ಮಾಡಿದೆ. ಅದರೆ ಚಿಂತಾಮಣಿ ಯಲ್ಲಿ ಅಹಾರ ನಿರಿಶೀಕ್ಷರು ಮತ್ತು ನ್ಯಾಯ ಬೆಲೆ ಅಂಗಡಿ ವಿತರಕರು ಸೇರಿ ಒಂದು ಕಾರ್ಡ್ ಗೆ 2 ಕೆಜಿ ಅಕ್ಕಿ ತೂಕದಲ್ಲಿ ಕಡಿಮೆ? ಮತ್ತು ಪ್ರತೀ ಪಡಿತರ ಕಾರ್ಡ್ ದಾರರಿಂದ ಹತ್ತು ರೂಪಾಯಿ ವಸೂಲಿ? ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನಮ್ಮೂರು ಟಿವಿ ವರದಿಗಾರ ಇಮ್ರಾನ್ ಸ್ಥಳಕ್ಕೆ ತೆರಳಿ ವೀಕ್ಷಿಸಿದಾಗ ಬಣ್ಣ ಬಯಲಾಗಿದೆ. ಒಟ್ಟಾರೆ ದೇವರು ಕೊಟ್ಟರೂ ಪೂಜಾರಿ ಕೊಡೊಲ್ಲ ಎನ್ನುವ ಗಾದೆಮಾತು ಇಲ್ಲಿ ಸಾಬೀತಾಗಿದೆ.

ಇಷ್ಟೆಲ್ಲಾ ನಡೀತಿದ್ರು ಸಂಬಂಧ ಪಟ್ಟ ಅಧಿಕಾರಿಗಳು ಘಾಡ ನಿದ್ರೆಯಲ್ಲಿದ್ದಂತಿದೆ. ಸರ್ಕಾರ ಬಡವನಿಗೆ ಕೊಡುವ ಅಕ್ಕಿಯನ್ನು ಕದ್ದು ತಿನ್ನೋ ಇಂಥಹ ಹೆಗ್ಗಣಗಳಿಗೆ ಸರಿಯಾದ ಪಾಠ ಕಲಿಸುವ ಅಧಿಕಾರಿಗಳು ಏನಾದರೂ ಇಲಾಖೆಯಲ್ಲಿ ಇದ್ದರೆ ಇನ್ನಾದರೂ ಎಚ್ಚೆತ್ತುಕೊಂಡು ಖಧೀಮರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರಾ? ಎನ್ನುವ ನಿರೀಕ್ಷೆ ನಮ್ಮದು.

1 COMMENT

  1. S. ಚಿಂತಾಮಣಿ ಯಾ ತುಂಬಾ ಡಿಪೋ ದ ಪರಸ್ಥಿತಿ ಇದ್ದೆ ….. ಕಂಪ್ಲೇಂಟ್ ಕೊಡೊ ಅಧಿಕಾರಿ phone nomber. ಇದ್ರೆ. ಕೊಡಿ…..plz

    ನಮಗೆ ಕೊಡೊ ಡಿಪೋ 125 128..ಜನಾರ್ದನ…… ಅವನು ಹೀಗೆ ಮೋಸ ಮಾಡ್ತಿದಾನೆ.

    ನನ್ನ್ ನೋಂಬೆರ್…..8867586838

LEAVE A REPLY

Please enter your comment!
Please enter your name here