ಪಂಚಗಿರಿ ಶಿಕ್ಷಣ ದತ್ತಿಯ ಜಯಂತಿ ಕಾರ್ಯಕ್ರಮ.

0
280

ಚಿಕ್ಕಬಳ್ಳಾಪುರ :ನಗರದ ಶ್ರೀ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಯ 21ನೇ ಜಯಂತಿ ಕಾರ್ಯ ಕ್ರಮ.

ನಗರದ ಶ್ರೀ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಯ 21ನೇ ಜಯಂತಿ ಅಂಗವಾಗಿ ಕೆ.ವಿ.ಕ್ಯಾಂಪಾಸ್ ನಲ್ಲಿ ಎಲ್ಲಾ ಸಿಬ್ಬಂದಿಯವರಿಗೆ ಮತ್ತು ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದವರಿಗು ಸಹ ಕ್ರೀಡಾಕೂಟವನ್ನ ಸಹ ಆಯೋಜಿಸಿದ್ದರು.
ಹಾಗು ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಭಿರದಲ್ಲಿ 1038 ಯೂನಿಟ್ ಗಳ ರಕ್ತ ಸಂಗ್ರಹಣೆ ಮಾಡುವ ಮೂಲಕ ರಾಷ್ಟದ ಜಿಲ್ಲಾ ಕೇಂದ್ರಗಳಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ಕೀರ್ತಿಗೆ ಶ್ರೀ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಭಾಜನವಾದರೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ದಾಖಲೆ ಮೆರೆದಿದೆ.
ಸಂಸ್ಥೆಯಲ್ಲಿ 1997 ರಲ್ಲಿ ಪ್ರಾರಂಭಗೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಭಿರಗಳು ಮಾಜಿ ಶಾಸಕ ಹಾಗೂ ದತ್ತಿ ಗಳ ಸಂಸ್ಥಾಪಕ ಅದ್ಯಕ್ಷ ದಿ.ಸಿವಿ.ವೆಂಕಟರಾಯಪ್ಪನವರ ಆಶಯದಂತೆ ಸಂಸ್ಥೆಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದತ್ತಿ ಅದ್ಯಕ್ಷ ಕೆ.ವಿ.ನವೀನ್ ಕಿರಣ್ ಶಿಭಿರದಲ್ಲಿ ಪಾಲ್ಗೊಂಡು ತಿಳಿಸಿದರು
ಈ ಬೃಹತ್ ರಕ್ತದಾನ ಶಿಭಿರದಲ್ಲಿ ಸಹಕರಿಸಿದ ಎಲ್ಲಾ ಸಂಘಟನೆ, ಸಂಘ ಸಂಸ್ಥೆ ಪದಾಧಿಕಾರಿಗಳಿಗೆ ಹಾಗೂ ದತ್ತಿಗಳ ಸಿಬ್ಬಂದಿ ವರ್ಗದವರಿಗೆ ನವೀನ್ ಕಿರಣ್ ಕೃತಜ್ಞತೆ ಸಲ್ಲಿಸಿದರು ಮತ್ತು ಈ ದಿನ ಜಯಂತಿ ಕಾರ್ಯ ಕ್ರಮದಲ್ಲಿ ನಂದಮೂರಿ ಬಾಲಕೃಷ್ಣ ರವರ ಅಬಿಮಾನಿಗಳನ್ನ ಸನ್ಮಾನಿಸಲಾಯಿತು.ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನಗಳನ್ನ ದತ್ತಿ ಅಧ್ಯಕ್ಷರಾದ ನವೀನ್ ಕಿರಣ್ ರವರು ವಿತರಿದರು.

ಅರಿಕೆರೆ ಮುನಿರಾಜು
ವರದಿಗಾರರು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here