ಪಂಚಾಯಿತಿಯಲ್ಲಿ ಕಾಂಗ್ರೆಸ್ ಜಯಭೇರಿ..

0
100

ದೇವನಹಳ್ಳಿ/ವಿಜಯಪುರ:ಸಮೀಪದ ಕೋರಮಂಗಲ  ಪಂಚಾಯಿತಿಯಲ್ಲಿ ಕಾಂಗ್ರೆಸ್ ಮೇಲುಗೈ.ತೀವ್ರ ಕುತೂಹಲ ಮೂಡಿಸಿದ್ದ ಕೋರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಲಕ್ಷ್ಮಮ್ಮ ಉಪಾಧ್ಯಕ್ಷ ರಾಮಕ್ಕ ಅವರು ಲಾಟರಿಯಲ್ಲಿ ಆಯ್ಕೆಯಾಗಿದ್ದಾರೆ.ಎಂದು ಚುನಾವಣಾಧಿಕಾರಿ ಶ್ರೀನಿವಾಸಮೂರ್ತಿ ಘೋಷಣೆ ಮಾಡಿದ್ದಾರೆ .

ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಮ ಪಂಚಾಯಿತಿಯಲ್ಲಿ ೧೦ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಪರಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು .ಅಧ್ಯಕ್ಷ ಸ್ಥಾನಕ್ಕೆ (ಜೆಡಿಎಸ್ )ಬೆಂಬಲಿತ ಕೊಂಡಪ್ಪ ಮತ್ತು ಕಾಂಗ್ರೆಸ್  ಬೆಂಬಲಿತ ಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದರು .ಉಪಾಧ್ಯಕ್ಷ ಸ್ಥಾನಕ್ಕೆ ರಾಮಕ್ಕ ,ಸುಶೀಲಮ್ಮ ಗೋವಿಂದಮ್ಮ ,ನಾಮಪತ್ರ ಸಲ್ಲಿಸಿದ್ದರು .ಇದರಲ್ಲಿ ಗೋವಿಂದ ನಾಮ ಪತ್ರ ವಾಪಸ್ ಪಡೆದಿದ್ದರು  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಮ್ಮ ಅವರಿಗೆ  (೫ )ಮತಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ  (೫ )ಮತಗಳು ಬಂದಿದ್ದರಿಂದ ಲಾಟರಿ  ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದರು.
ವಿಧಾನಸಭೆ ಚುನಾವಣೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು .ಹಲವಾರು ವರ್ಷಗಳಿಂದ ಜೆಡಿಎಸ್ ವಶದಲಿ ಇದ್ದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸದಸ್ಯ ಸ್ಥಾನದ ಬಲ ಸಮಬಲಸ್ಥಾನಗಳು ಬಂದಿದ್ದರಿಂದ ಮುಖಂಡರು ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ನಡೆದಿದ್ದರೂ ಸಾಧ್ಯವಾಗಲಿಲ್ಲ .
ನೂತನ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ನೂರಾರು ಮಂದಿ ಕಾರ್ಯಕರ್ತರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯನ್ನು ಅಭಿನಂದಿಸಿದರು .

ಮುಖಂಡ ಸಿಎಂ ಕೃಷ್ಣಪ್ಪ ಮಾತನಾಡಿ ಅನೇಕ ವರ್ಷಗಳ ನಂತರ ಕಾಂಗ್ರೆಸ್ ಬೆಂಬಲಿತ ಸದಸ್ಯರ ಅಧಿಕಾರ ಚುಕ್ಕಾಣಿ ಹಿಡಿದಿದ್ದು ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವುದು.ಶುದ್ಧ ಕುಡಿಯುವ ನೀರು ಪೂರೈಕೆ ಕಡೆಗೆ ಗಮನಹರಿಸಿ ಸ್ವಚ್ಛತೆ ಕಾಪಾಡುವುದರ ಬಗ್ಗೆ  ಗಮನಹರಿಸಿ  ಮೂಲಸೌಕರ್ಯಗಳನ್ನು ಒದಗಿಸುವುದು . ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ (ಬಿ .ಚೇತನ್ ಗೌಡ )ಚಿನ್ನಪ್ಪ   ,<  ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಲಕ್ಷ್ಮಣ ಗೌಡ  ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಮುನಿರಾಜು ,
ಮುಖಂಡ ಹಾರೋಹಳ್ಳಿ ಚಂದ್ರಪ್ಪ  ಹನುಮಂತಪ್ಪ  ,    ಮುನಿಶಾಮಪ್ಪ ,   ಪಾಪರಾಜು , ಕಾಂಗ್ರೆಸ್(  ಎಸ್ಸಿ  ಸಿ) ಘಟಕ ಅಧ್ಯಕ್ಷ ಮುದುಗುರ್ಕಿ ನಾರಾಯಣ  ಸ್ವಾಮಿ, ಕೋರಮಂಗಲ ಕೃಷ್ಣಪ್ಪ  ,ಮುನಿರಾಜಪ್ಪ <, ಚಿನ್ನಪ್ಪ ,
ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ತಿಲಕ್ ಕುಮಾರ್ , ಮಂಜುನಾಥ್  ,ಗೋವಿಂದಮ್ಮ  < ಮುಖಂಡರಾದ ನಾರಾಯಣಪ್ಪ , ವೆಂಕಟೇಶಪ್ಪ  ,ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here