ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯ .?

0
166

ಬಳ್ಳಾರಿ/ ಹೊಸಪೇಟೆ: ಮರಿಯಮ್ಮನಹಳ್ಳಿ ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ ಮಳೆ , ಚರಂಡಿ ನೀರು ಹರಿದು ಗುಂಡಿಗಳಾಗಿ ಸೊಳ್ಳೆ ಗಳ ಉತ್ಪಾದನಾ ಕೇಂದ್ರ ಗಳಾಗಿ ಗ್ರಾಮದಲ್ಲೀಗ ವಿಷಮಶೀತಜ್ವರ , ಡೆಂಘಿ ಉಲ್ಪಣಗೊಂಡು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ . ಈಗಾಗಲೇ ಗ್ರಾಮದ ಅನೇಕರು ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಡೆಂಘಿ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ . ಗ್ರಾಮದಲ್ಲಿ ಕೆಲವೆಡೆ ಚರಂಡಿ ಗಳಿಲ್ಲದೆ ಕೊಳಚೆಗಳಾಗಿ ನೀರು ನಿಂತು , ಕೊಚ್ಚೆಯಾದ ಬಗ್ಗೆ ಸಂಭಂದಿಸಿದ ಜಿ . ನಾಗಲಾಪುರ ಗ್ರಾಮ ಪಂಚಾಯತಿ ಗೆ ದೂರು ನೀಡಿದ್ದರು ಇದುವರೆಗೂ ಇತ್ತಕಡೆ ಗಮನಹರಿಸಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ .ಹೊಬಳಿ ಘಟಕ ಅಧ್ಯಕ್ಷ ಈ ರಮೇಶ್ ದೂರಿದರು . ಗ್ರಾಮದಲ್ಲಿ ಡೆಂಘಿ , ಮಲೇರಿಯಾ , ವಿಷಮ ಶೀತಜ್ವರ , ಉಲ್ಬಣಗೊಳ್ಳುವ ಮುಂಚೆ ಗ್ರಾ , ಪಂ , ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕು ಇಲ್ಲ ದಿದ್ದರೆ ಗ್ರಾಮ ಪಂಚಾಯತಿ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಆಗ್ರಹಿಸಿದರು .

LEAVE A REPLY

Please enter your comment!
Please enter your name here