ಪಂಚಾಯ್ತಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ.

0
82

ಚಿಕ್ಕಬಳ್ಳಾಪುರ/ ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿಯ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ.

ಒಟ್ಟು 20 ಸದಸ್ಯರಲ್ಲಿ ಮಾಜಿ ಶಾಸಕರಾದ ಡಾ .ಎಂ.ಸಿ ಸುಧಾಕರ್ ಪಕ್ಷದ ಇಬ್ಬರೂ ಬೆಳಗ್ಗೆ 11 ಗಂಟೆಗೆ ಶುರುವಾದ ಚುನಾವಣೆ 12 ಗಂಟೆವರೆಗೆ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಿದ್ದರು . ನಂತರ ಮಧ್ಯಾನ 12 :30 ಗಂಟೆ ನಂತರ ನಾಮ ಪತ್ರಿಕೆಯನ್ನು ಪರಿಶೀಲನೆ ಮಾಡಿದರು.
ಮಧ್ಯಾಹ್ನ ಎರಡು ಗಂಟೆ ನಂತರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರನ್ನು ಘೋಷಿಸಿದರು . ಅಧ್ಯಕ್ಷರಾಗಿ ಶಂಕರ ಮತ್ತು ಉಪಾಧ್ಯಕ್ಷರಾಗಿ ನಾರಾಯಣಮ್ಮ ರವರು ಎಂದು ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ತಿಳಿಸಿದರು .

ನಂತರ ನೂತನ ಅಧ್ಯಕ್ಷರಾದ ರವರು ಮಾತನಾಡಿ ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಮೊದಲ ಆಧ್ಯತೆಯನ್ನು ನೀಡುತ್ತೇನೆ ಎಂದು ತಿಳಿಸಿದರು .
ನಂತರ ಉಪಾಧ್ಯಕ್ಷರಾದ ರವರು ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯಲ್ಲಿ ನೀರಿನ ಸಮಸ್ಯೆ ಇರಬಹುದು ಬಡವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕಲ್ಪಿಸುತ್ತೇವೆ ನಮ್ಮ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ಸೇರಿ ಒಟ್ಟಾಗಿ ಗ್ರಾಮ ಪಂಚಾಯತಿ ಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳದ ಮಂಜುನಾಥ್ ,ನಾರಾಯಣ್ ಸ್ವಾಮಿ, ನಾಗಮಣಿ , ದ್ಯಾವಮ್ಮ , ವೆಂಕಟರತ್ನಮ್ಮ, ಪಿ ವಿ ಎಂಡಿ ಚೌಡರೆಡ್ಡಿ ,ದೇವರಾಜು , ಚಂದ್ರಶೇಕರ್ , ಮುನಿಶಾಮಪ್ಪ , ಅಕ್ಕಮ್ಮ , ನಾರಾಯಣಮ್ಮ, ಮಂಜುನಾಥ್,ಗಂಗಾಭವಾನಿ,ವೆಂಕಟ ಲಕ್ಷ್ಮಮ್ಮ, ವೆಂಕಟಮ್ಮ , ಪದ್ಮ , ಶಂಕರ , ನಾರಾಯಣ್ ಸ್ವಾಮಿ , ಶ್ಯಾಮೇ ಗೌಡ , ಸಂಗೀತ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here