ಪಂಜಿನ ಮೆರವಣಿಗೆ…

0
505

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಮೇಣದ ಬತ್ತಿ ಹಾಗೂ ಪಂಜಿನ ಮೆರವಣಿಗೆ ಮೂಲಕ ಜಮ್ಮು ಕಾಶ್ಮೀರದ ಕಟುವ ಎಂಬ ಪ್ರದೇಶದಲ್ಲಿ ಎಂಟು ವರ್ಷದ ಅಸೀಫಾ ಎಂಬ ಅಪ್ರಾಪ್ತ ಬಾಲಕಿ ಯನ್ನು ಅತ್ಯಾಚಾರ ವೆಸಗಿ ಕೊಲೆಮಾಡಿರುವ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ.

ಈ ಹೀನ ಕೃತ್ಯವನ್ನು ಖಂಡಿಸಿ. ಜಮೀಯಾ ಮಸೀದಿ ಮತ್ತು ಮದೀನ ಮಸೀದಿ ಕಮಿಟಿಗಳು ಹಾಗೂ ಯುನಿಟಿ ಸಿಲ್ ಸಿಲಾ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟಿಸಿ ಅಮೀರ್ ಬಾಬಾ ದರ್ಗದಿಂದ ಕೋಟೆ ಸರ್ಕಲ್ ವರೆಗೂ ತೆರಳಿದ ನಂತರ ತಾಲ್ಲೂಕು ಕಛೇರಿಗೆ ಆಗಮಿಸಿ ಇತ್ತೀಚಗೆ ಅತ್ಯಾಚಾರಗಳನ್ನು ಹೆಚ್ಚಾಗಿ ನಡೆಯುತ್ತಿರುವುದರ ವಿರುದ್ದ ಕೇಂದ್ರ ಸರ್ಕಾರವನ್ನು ಖಂಡಿಸಿ ತಾಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಆಸೀಫಾಳ ಭಾವ ಚಿತ್ರ ಹಿಡಿದು ಮೇಣದ ಬತ್ತಿಗಳೊಂದಿಗೆ ಮೆರವಣಿಗೆಯಲ್ಲಿ ವಿ ಕೇಟ್ ಯು ಪೌಡೇಷನ್, ಕೋಹಿನೂರು ಟಿಪ್ಪು ತಾಲೀಮ್ ಮೈನಾರಿಟಿ ವೆಲ್ ಫರ್ ಟ್ರಸ್ಟ್, ದಲಿತ ಸಂಘರ್ಷ ಸೇನೆ, ಮಾದಿಗ ದಂಡೋರ, ಬಿಲಾಲ್ ಯೂತ್ ಕಮಿಟಿ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಮುಖಂಡರಾದ ಮಹಮದ್ ಅಸಾದ್, ಮುಜುವೀಲ್, ಅಮ್ಜ್ ದ್ , ನವಾಜ್ ಪಾಷ, ಗಫೂರ್ ಖಾನ್, ನಾಗನರಸಿಂಹ, ಕೃಷ್ಣಮೂರ್ತಿ, ಎನ್ ಟಿ ಆರ್ , ಹರ್ಷದ್, ಗೌಸ್ ಪಾಷ, ಅತಿಹ್ ಪಾಷ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲೀಂ ಬಂದವರು ಪ್ರತಿಭಟನೆಯಲ್ಲಿ ಭಾಗವಹಿದ್ದರು.

LEAVE A REPLY

Please enter your comment!
Please enter your name here