ಪಂಡಿತ್ ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ

0
223

ಮಂಡ್ಯ/ಮಳವಳ್ಳಿ: ದೇಶದ ಪ್ರತಿ ಗ್ರಾಮದಲ್ಲೂ ಈ ಭಾರಿ ಬಿಜೆಪಿ ಪಕ್ಷದ ಅಲೆ ಎದ್ದಿದೆ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ತಿಳಿಸಿದರು,

ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಬಿಜೆಪಿಪಕ್ಷದ ವತಿಯಿಂದ ಪಂಡಿತ್ ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ ಹಾಗೂ ಮಹಾ ಸಂಪರ್ಕ ಅಭಿಯಾನ ಅಂಗವಾಗಿ ಬಿಎಲ್ ಎ2 ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತ್ರವಿತ್ತು. ಆದರೆ ಈಗ ಪ್ರತಿ ಗ್ರಾಮದಲ್ಲೂ ಯುವಕರ ಗುಂಪು ಬಿಜೆಪಿ ಪಕ್ಷದ ಕಡೆಗೆ ಬರುತ್ತಿದ್ದು , ಈ ಕ್ಷೇತ್ರದಲ್ಲಿ ಬಿಜೆಪಿ ಯ ಕಮಲವನ್ನು ಆರಳುಸುತ್ತವೆ. ಎಂಬ ವಿಶ್ವಾಸ ಮೂಡಿದೆ ಎಂದರು. ಪ್ರತಿ ಗ್ರಾಮದಲ್ಲೂ ಕೇಂದ್ರ ಸಕಾ೯ರ ದ ಯೋಜನೆಗಳ ಮಾಹಿತಿ ನೀಡುತ್ತಿದ್ದು . ಈ ಬಾರಿ ಬಿಜೆಪಿ ಕಾರ್ಯಕರ್ತರ ಸಕ್ರಿಯೆವಾಗಿ ದುಡಿಯುತ್ತಿದ್ದಾರೆ ಎಂದರು . ಕಾಯ೯ಕ್ರಮ ದಲ್ಲಿ ರಾಜ್ಯ ಮುಖಂಡ ಸುರೇಶ ಬಾಬು, ಪಣೇಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ, ವಿಜಯಕುಮಾರ್. ಅಪ್ಪಾಜಿಗೌಡ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರು ಸಿದ್ದರಾಜು, ಎಂ.ಎನ್ ಕೃಷ್ಣ, ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ, ಪುರಸಭೆ ಉಪಾಧ್ಯಕ್ಷೆ ಸುಮನಾಗೇಶ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here