ಪಕ್ಷಗಳ ಮುಖಂಡರ ಸಭೆ..

0
131

ಮಂಡ್ಯ/ಮಳವಳ್ಳಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ಚುನಾವಣೆಯನ್ನು ಕಾನೂನು ರೀತಿ ನಡೆಸುವಂತೆ ಚುನಾವಣಾಧಿಕಾರಿ ವಿ.ಆರ್ ಶೈಲಜ ತಿಳಿಸಿದರು.ಮಳವಳ್ಳಿಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ವಿ ಆರ್. ಶೈಲಜ ನೇತೃತ್ವದಲ್ಲಿ ಪಕ್ಷಗಳ ಮುಖಂಡರ ಸಭೆ ಮಾತನಾಡಿ, ಚುನಾವಣಾ ವೆಚ್ಚವನ್ನು ದಾಖಲು ಮಾಡುವಂತೆ ಹಾಗೂ ಸಭೆ ಸಮಾರಂಭದ ಖರ್ಚುಗಳ ಬಗ್ಗೆ ಮಾಹಿತಿ ನೀಡಬೇಕು.ಎಂದರು.ಮಳವಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 271 ಮತಗಟ್ಟೆಗಳಿದ್ದು 118857 ಗಂಡಸರು , 116450 ಹೆಂಗಸರು ಒಟ್ಟು 235324 ಮತದಾರರಿದ್ದು ಎಲ್ಲಾ ಮತಗಟ್ಟೆ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಎಂದರು ಇದೇ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ ಯಾವುದೇ ದೂರುಗಳನ್ನು ನೀಡಬಹುದಾಗಿದೆ . ಕಚೇರಿಯಲ್ಲಿ ಇಂದಿನಿಂದ 24 ಗಂಟೆಗಳ ಕಾಲ ದೂರು ನೀಡಬಹುದು. ಇದಲ್ಲದೆ ಮತದಾನಕ್ಕಾಗಿ ಗುರುತಿನ ಚೀಟಿ ಹೊಸದಾಗಿ ನೊಂದಣಿ ಮಾಡಲು ಇದೇ 14 ರೊಳಗೆ ಮಾಡಿಕೊಳ್ಳಬಹುದು. ಎಂದರು ಸಭೆಯಲ್ಲಿ ಡಿವೈ ಎಸ್ ಪಿ ಮಲ್ಲಿಕ್ , ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here