ಪಕ್ಷದ ಸಾಧನಾ ಸಮಾವೇಶ…

0
144

ಬೆಂಗಳೂರು/ಹೊಸಕೋಟೆ: ಕಾಂಗ್ರೇಸ್ ಪಕ್ಷದ ಸಾಧನಾ ಸಮಾವೇಶ ಹಿನ್ನೆಲೆ.ಹೊಸಕೋಟೆ ಪಟ್ಟಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ.ಕಾಂಗ್ರೇಸ್ ಪಕ್ಷದ ವತಿಯಿಂದ ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿರೂ ಸಮಾವೇಶ.

ಸಿಎಂ ಸಿದ್ದರಾಮಯ್ಯಗೆ ಸ್ಥಳಿಯ ಶಾಸಕ ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ವೀರಪ್ಪಮೋಯ್ಲಿ,ದಿನೇಶ್ ಗುಂಡುರಾವ್ ಸಾಥ್.ಹೊಸಕೋಟೆ ಕಾಂಗ್ರೇಸ್ ಪಕ್ಷದ ಸಾಧನಾ ಸಮಾವೇಶದಲ್ಲಿ ಸಮಾವೇಶ ಉದ್ದೇಶಿಸಿ ಸಿಎಂ ಬಾಷಣ.ಇದು ಸರ್ಕಾರದ ಕಾರ್ಯಕ್ರಮ ಅಲ್ಲ ಬ್ಲಿಗೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಶಾಸನ ಎಂಟಿಬಿ ನಾಗರಾಜ್ ಮಾಡಿರುವ ಸಾದನೆಗಳ ಕಾರ್ಯಕ್ರಮ.
ಹೊಸಕೋಟೆ ಕ್ಷೇತ್ರದಲ್ಲಿ ಈ ಹಿಂದೆ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು ಎಂಟಿಬಿ ನಾಗರಾಜು ಶಾಸಕರಾದ ಮೇಲೆ ಇಲ್ಲಿನ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಕುರುಬ ಜನಾಂಗದಲ್ಲಿ ಅತ್ಯಂತ ಶ್ರೀಮಂತ ಶಾಸಕ ಎಂಟಿಬಿ ನಾಗರಾಜ್ ಆಗಿದ್ದು ಹೊಸಕೋಟೆ ಕ್ಷೇತ್ರದ ಜನರಿಗೆ ಆರ್ಥಿಕ ಸಮಸ್ಯೆ ಭಾರದಂತೆ ನೋಡಿಕೊಳ್ಳುತ್ತಿರುವ ರಾಜ್ಯದ ಏಕೈಕ ಶಾಸಕ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ರಾಜ್ಯದಲ್ಲಿ ಅದಿಕಾರಕ್ಕೆ ಬರಲಿದ್ದು ನಾಗರಾಜು ಸಚಿವರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೇಸ್ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಅಂತ ಅಮಿತ್ ಷಾ ರಾಜ್ಯಕ್ಕೆ ಬಂದು ಹೇಳಿದ ಮೇಲೆ ಬಿಜೆಪಿಯವರು ಪರಿವರ್ತನಾ ರ್ಯಾಲಿ ಹಮ್ಮಿಕೊಂಡಿದ್ದಾರೆ.ಇಂದು ನಮ್ಮ ಭಾರತದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನ ಕೊಟ್ಟಂತಹ‌ ವ್ಯಕ್ತಿ.ಬಿಜೆಪಿಯವರಿಗೆ ಸಂವಿದಾನದಲ್ಲಿ ನಂಬಿಕೆಯಿಲ್ಲ, ಸಂವಿದಾನದಲ್ಲಿ ನಂಬಿಕೆಯಿಲ್ಲದವರಿಗೆ ಈ ದೇಶದಲ್ಲಿ ಆಡಳಿತ ಮಾಡಲು ಯೋಗ್ಯತಯಿಲ್ಲ‌. ಆಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು. ಕುಮಾರಸ್ವಾಮಿ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು, ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬಿಜೆಪಿ ಬರ್ತಾನೆಯಿರಲಿಲ್ಲ‌. ಮುಂದಿನ ದಿನಗಳಲ್ಲು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಾರದ ಹಾಗೆ ಕಾಂಗ್ರೇಸ್ ಕಾರ್ಯಕರ್ತರು ಎಚ್ಚರವಹಿಸಬೇಕು.ಮಾಜಿ ಸಚಿವ ಬಚ್ಚೇಗೌಡ ಸಹ ಅವಕಾಶವಾದಿ, ಕಾಂಗ್ರೇಸ,ಜೆಡಿಎಸ್, ಬಿಜೆಪಿ ಪಕ್ಷಗಳಿಗೆ ಬಂದು ಸಚಿವರಾಗಿದ್ದವರು, ಅವರಿಗೆ ಬಡವರ ಕಷ್ಟದ ಅರಿವಿಲ್ಲ. 2013-14 ರಲ್ಲಿ ನಾವು ಅಧಿಕಾರಆದ್ರೆಬಂದಾಗ ಕರ್ನಾಟಕ ರಾಜ್ಯ 11 ನೇ ಸ್ಥಾನದಲಿತ್ತು.ಆದ್ರೆ ನಾವು ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ಗುಜುರಾತ್ ಅನ್ನ ಇಂದಿಟ್ಟು ಮೊದಲನೆ ಸ್ಥಾನಕ್ಕೆ ಬಂದಿದೆ.
ನಾವು ಬಿಜೆಪಿಯವರ ರೀತಿ ಸುಳ್ಳು ಮಾತುಗಳನ್ನ ಹೇಳಲ್ಲ‌, 4.5 ವರ್ಷದಲ್ಲಿ ನಾವು ರಾಜ್ಯದಲ್ಲಿ ಮಾಡಿರೂ ಅಭಿವೃದ್ದಿ ಕಾರ್ಯಗಳನ್ನ ಮನೆ ಮನೆಗಳಿಗೆ‌ ತಲುಪಿಸುವ ಮುಖಾಂತರ ಮುಂದಿನ ಭಾರಿ ಅಧಿಕಾರ ಕೊಡಿ ಅಂತ ಕೇಳಿಕೊಳ್ಳುತ್ತಿದ್ದೇವೆ. ಭಾರತದಲ್ಲಿ ಎಲ್ಲಾ ಜಾತಿ ದರ್ಮದವರನ್ನ ಒಂದುಗೂಡಿಸುವಂತ ಪಕ್ಷವಿದ್ರೆ ಅದು ಕೇವಲ‌ ಕಾಂಗ್ರೇಸ್ ಪಕ್ಷ. ಮೋದಿಯವರ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೊಗುತ್ತಿದೆ‌.ಕಪ್ಪುಹಣಗಳ್ಳರಿಗೆ ನಿದ್ದೆಗೆಡಿಸುತ್ತೆನೆ,ಭ್ರಷ್ಟಾಚಾರ ತೊಳೆದುಹಾಕ್ತಿನಿ, ನಖಲಿ ನೋಟುಗಳ ನಿಯಂತ್ರಣ ಮಾಡ್ತೇವೆ ಅಂತ ಸುಳ್ಳುಭರವಸೆಗಳನ್ನ ನೀಡುತ್ತಾ ಹಿಟ್ಲರ್‌ ಕಾಲದಲ್ಲಿದ್ದ ಗ್ಲೋಬೆಲ್ ಎಂಬ ಮಂತ್ರಿಯವರ ತಿಯರಿ ರೀತಿ ಬರೀ ಸುಳ್ಳುಗಳನ್ನೆ ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here