ಪಕ್ಷ ತೊರೆದ ಸಾವಿರಾರು ಕಾರ್ಯಕರ್ತರು!

0
802

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದಲ್ಲಿ ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ ಬಣಕ್ಕೆ ಸೇರ್ಪಡೆ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮ.

ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸ್ ರೆಡ್ಡಿ ಅವರ ನೇತತ್ವದಲ್ಲಿ ಹಮ್ಮಿಕೊಂಡಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕಿನ ಹಳ್ಳಿಗಳಿಂದ ಮತ್ತು ನಗರದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆದು ಡಾ.ಎಂ.ಸಿ ಸುಧಾಕರ ಬಣಕ್ಕೆ ಬೃಹತ್ ಸೇರ್ಪಡೆಯಾದರು.

ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ಶಾಸಕನಾಗಿ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಬಿಟ್ಟು ನಾವು ಅಕ್ರಮ ಆಸ್ತಿಗಳು ಮಾಡಿದ್ದೇವೆ ಸರ್ಕಾರಿ ಜಮೀನು ಕಬಳಿಕೆ ಮಾಡುವುವೆಂದು ಪದೆ ಪದೆ ಆಸ್ತಿಗಳ ವಿಚಾರದಲ್ಲಿ ತಲೆ ದೂರುತ್ತಿದ್ದೀರಲ್ಲಾ ನೀವೇನು ಸಿಬಿಐ ಅಧಿಕಾರಿಗಳಾ ? ಇಲ್ಲಾ ನಿರ್ದೇಶಕರುಗಳಾ ಎಂದು ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ವಿರುದ್ಧ ಮಾಜಿ ಶಾಸಕ ಎಂ.ಸಿ ಸುಧಾಕರ ಕಿಡಿಕಾರಿದರು.

ಇದುವರೆಗೂ ಹೆಚ್ ಡಿ ಕುಮಾರಸ್ವಾಮಿಯವರ ಕೇಸುಗಳೆ ಇರ್ಥ್ಯತವಾಗಿಲ್ಲ* ನಿವೇನೂ ಸಿಬಿಐ ಅಧಿಕಾರಿಗಳಾದಂತೆ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಎಷ್ಟೋ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ ಅವರು ಇನ್ನಷ್ಟು ಬೇಲ್ ತೆಗೆದುಕೊಂಡಿದ್ದರೂ ಹಾಗೂ ರೇರಾ ಸಂಸ್ಥೆಯು ನೀವು ಕಾನೂನು ಬಾಹಿರವಾಗಿ ಕಟ್ಟಿ ರಸ್ತೆ ಇಲ್ಲದ ಅಪಾರ್ಟ್‌ ಮೆಂಟ್ ಯೋಗ್ಯತೆ ಏನೆಂದು ಜನಸಾಮಾನ್ಯರಿಗೂ ಗೊತ್ತಿದೆ.ರಸ್ತೆ ಬ್ಲಾಕ್ ಮಾಡುದ್ದೀರಲ್ಲಾ. ರಸ್ತೆ ಇಲ್ಲದೆ ಅಪಾರ್ಟ್‌ಮೆಂಟ್ ಕಟ್ಟಿ ಅಮಾಯಕರಿಗೆ ಮಾರಾಟ ಮಾಡಿದ್ದೀರಲ್ಲಾ ಇವೆಲ್ಲಾ ಕಾನೂನು ಬಾಹಿರ ಅಲ್ವಾ? ಶಾಸಕರೇ ಮಾಡುವ ಕೆಲಸ ಬಿಟ್ಟು ಪದೆ ಪದೇ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೇನಿದೆ. ನೀವು ಮಾಡ್ತಿರೋದೇನು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗೃಹಸಚಿವ ಚೌಡರೆಡ್ಡಿ , ಸುಬ್ಬರೆಡ್ಡಿ ಮುನಿಸ್ವಾಮಿ ಅಬ್ದುಲ್ ಘನಿ, ಮುನುಸ್ಟಾರ್ ಗೌಸ , ನಗರಸಭೆ ಸದಸ್ಯರು ಅಬ್ಬುಗುಂಡು ಶ್ರೀನಿವಾಸ್ ರೆಡ್ಡಿ ,ಚಲಪತಿ, ಗೋವಿಂದಪ್ಪ ಮತ್ತು ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here