ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ:ಜೆ‌.ನರಸಿಂಹಸ್ವಾಮಿ

0
171

ದೊಡ್ಡಬಳ್ಳಾಪುರ: ವಿಧಾನಸಭಾ ಚುನಾವಣೆ ಇನ್ನೂ ಸುಮಾರು ಒಂದು ವರ್ಷಿರುವಾಗಲೇ ಪ್ರತಿಷ್ಟಿತ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ಪಕ್ಷದ ಶಾಸಕ ಜೆ.ನರಸಿಂಹಸ್ವಾಮಿ ಜಾತ್ಯಾತೀತ ಜನತಾದಳ ಸೇರಲಿದ್ದಾರೆ ಎಂದು ಇತ್ತೀಚೆಗೆ ಒಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಜನತೆಯಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುತ್ತಿದ್ದ ಹಿನ್ನಲೆಯಲ್ಲಿ ಪತ್ರಿಕೆಯಲ್ಲಿ ಬಂದಿದ್ದು ಸುಳ್ಳುಸುದ್ದಿ ಎಂದು ಕ್ಷೇತ್ರದ ಜನತೆಯಲ್ಲಿನ ಗೊಂದಲ ಹೋಗಲಾಡಿಸಲು  ಜೆ.ನರಸಿಂಹಸ್ವಾಮಿಯವರು ದಿ.19 ರಂದು ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಟಿಕರೆದು  ಪತ್ರಕಾಗೋಷ್ಟಿ ಯಲ್ಲಿ ನಾನು ಬಿಜೆಪಿ ಪಕ್ಷ ತೊರೆಯುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಜೆಡಿಎಸ್ ಪಕ್ಷಕ್ಕೆ ಹೋಗುವ ಅಗತ್ಯವೂ ನನಗೆ ಇಲ್ಲ, ಮುಂದಿನ ಚುನಾವಣೆಯಲ್ಲಿ‌ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ನಾನೆ ಕಾರ್ಯಕರ್ತರಲ್ಲಿ ಮತ್ತು ಕ್ಷೇತ್ರದ ಜನತೆಯಲ್ಲಿ ಗೊಂದಲ ಬೇಡ. ಈ ಸುಳ್ಳು ವದಂತಿ ನನಗೆ ಆಗದವರು ಯಾರಾದರೂ ಮಾಡಿರಬಹುದು. ಅಷ್ಟು ಬಿಟ್ಟರೇ ಯಾವುದೇ ರೀತಿಯ ಅಧಿಕೃತವಾದ ಮಾಹಿತಿ ಇದಲ್ಲ ಎಂದು ಸ್ಪಷ್ಟೀಕರಣ ನೀಡಿದ ಅವರು ಸುಳ್ಳು ವದಂತಿಗೆ ತೆರೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here