ಪಟ್ಟಣದ ಅಂದಕ್ಕಾಗಿ ಪಾರ್ಕ್ ಗಳ ನಿರ್ಮಾಣ..

0
154

ಚಾಮರಾಜನಗರ/ಕೊಳ್ಳೇಗಾಲ:ನಗರದ ಮೂರು ಕಡೆಗಳಲ್ಲಿ ಪಾರ್ಕ್ ಗಳ ನಿರ್ಮಾಣ ಮಾಡಲಾಗುತ್ತಿದ್ದು ಇದರಿಂದ ಪಟ್ಟಣದ ಅಂದ ಹೆಚ್ಚಾಗುತ್ತದೆ ಎಂದು ಶಾಸಕ ಜಯಣ್ಣ ಅಭಿಪ್ರಾಯ ಪಟ್ಟರುಶ್ರೀ.ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನೂತನವಾಗಿ ನಿರ್ಮಾಣವಾಗುವ ಪಾರ್ಕಿನ ಶಾಶ್ವತ ಸುರಕ್ಷತೆಗಾಗಿ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳು ಸ್ಪಷ್ಟ ರೀತಿಯಲ್ಲಿ ಕಾಣುವಂತಿರಬೇಕು. ಲ್ಯಾಂಡ್ ಸ್ಕೇಪ್ ಪ್ರಕಾರ ಅತ್ಯುತ್ತಮ ಗುಣಮಟ್ಟದ ಕೆಲಸ ಮಾಡುವಂತೆ ಹೇಳಿದರು.13-14ನೇ ಹಣಕಾಸು ಯೋಜನೆಯಲ್ಲಿ ನಗರ ವ್ಯಾಪ್ತಿಯ ಮೂರು ಸ್ಥಳಗಳಲ್ಲಿ ಒಟ್ಟು 32 ಲಕ್ಷ ಅಂದಾಜು ಮೊತ್ತದಲ್ಲಿ ಪಾರ್ಕ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ಪೈಕಿ ಮಹದೇಶ್ವರ ಕಾಲೇಜಿನಲ್ಲಿ 16 ಲಕ್ಷ, ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಲಕ್ಷ ಹಾಗು ನ್ಯಾಯಾಲಯದ ಆವರಣದಲ್ಲಿ 6 ಲಕ್ಷ ಅಂದಾಜಿನಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಈ ವೇಳೆ ನಗರಸಭಾ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಸದಸ್ಯರಾದ ಸೈಯದ್ ಕಲೀಮುಲ್ಲಾ, ಅಕ್ಮಲ್ ಪಾಶ, ರಾಘವೇಂದ್ರ, ಪ್ರಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಹದೇಶ್ವರ ಕಾಲೇಜು ಪ್ರಾಂಶುಪಾಲ ಪುಟ್ಟಲಿಂಗಯ್ಯ, ನಗರಸಭಾ ಜೆಇ ನಾಗೇಂದ್ರ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here