ಪಟ್ಟಣ ಪಂಚಾಯಿತಿ ಬಜೆಟ್

0
201

ಚಿಕ್ಕಬಳ್ಳಾಪುರ/ಗುಡಿಬಂಡೆ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್ ನಾಯ್ಡು ಅಧ್ಯಕ್ಷತೆಯಲ್ಲಿಸೋಮವಾರ ನಡೆದ ಆಯ ವ್ಯಯ ಸಭೆಯಲ್ಲಿ ೨೦೧೭-೧೮ ನೇ ಸಾಲಿಗೆ ೪.೯೧ ಕೋಟಿರೂಗಳ ಬಜೆಟನ್ನು ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಮಂಡಿಸಿ ಅನುಮೋದನೆ ಪಡೆದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಚಂದ್ರಶೇಖರ್, ಈ ಬಾರಿಯ ಆಯವ್ಯಯದಲ್ಲಿ ಕುಡಿಯುವನೀರು, ರಸ್ತೆ, ಚರಂಡಿ ಮೊದಲಾದ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಚೇರಿ ಸಿಬ್ಬಂದಿಯಲ್ಲಿ ಧಕ್ಷತೆ ತರಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ರಸ್ತೆ ಅಗಲೀಕರಣದ ವೇಳೆ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ಮತ್ತು ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತೆ ಎಂದರು. ಬಜೆಟ್ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ, ಬೇಸಿಗೆ ಪ್ರಾರಂಭವಾಗಿರುವ ಈ ದಿನಗಳಲ್ಲಿಪರಿಸ್ಥಿತಿ ನಿಬಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯಕ್ಕೆ ಪಟ್ಟಣದಲ್ಲಿ ಕುಡಿಯುವನೀರಿಗೆ ಅಭಾವವಿಲ್ಲ. ೪೫ ಕೊಳವೆ ಬಾವಿಗಳ ಪೈಕಿ ೧೫ ರಲ್ಲಿ ಸಾಕಷ್ಟು ನೀರಿದ್ದು ನೀರಿನಸುಗಮ ಸರಬರಾಜಿಗೆ ನಗರೋತ್ಥಾನ ಯೋಜನೆಯಡಿ ಜಲಸಂಗ್ರಹಾಗಾರಗಳನ್ನು ಹೊಸದಾಗಿ ನಿರ್ಮಿಸಿ ಪ್ರತಿದಿನ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಸರ್ಕಾರದ ಅನುದಧಾನಗಳು, ಆಸ್ತಿತೆರಿಗೆ, ಕಟ್ಟಡಬಾಡಿಗೆ, ಸೇರಿದಂತೆ ವಿವಿಧ ಮೂಲಗಳಿಂದ ೪.೮೧ ಕೋಟಿ ರೂಗಳ ಆದಾಯ ನಿರೀಕ್ಷಿಸಲಾಗಿದೆ. ಒಟ್ಟು ಆಯವ್ಯಯದ ಗಾತ್ರ ಹಿಂದಿನ ಶಿಲ್ಕು ೧೦.೨೪ ಕೋಟಿ ಸೇರಿ ೪.೯೧ ಕೋಟಿ ರೂಗಳು. ಇದರಲ್ಲಿ ನಿರೀಕ್ಷಿತ ವೆಚ್ಚ ೪.೮೮ ಕೋಟಿರೂಗಳಾಗಿದೆ. ಆಯವ್ಯಯದ ಬಹುಪಾಲು ಹಣ ಪಟ್ಟಣದ ಅಭಿವೃದ್ಧಿಗಾಗಿ ಮೀಸಲಿಡಲಾಗಿದ್ದು ಉಳಿದಂತೆ ನೌಕರರ ಸಂಬಳ, ಸಾರಿಗೆ, ಕಚೇರಿ ನಿರ್ವಹಣೆ, ದುರಸ್ತಿ ಕಾಮಗಾರಿಗಳು ಮುಂತಾದುವು ಸೇರಿವೆ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯ ರಮೇಶ್ ತಮ್ಮ ವಾರ್ಡಿನ ಮಾರುತಿ ವೃತ್ತದಲ್ಲಿ ಬೀದಿ ದೀಪಕೆಟ್ಟು ನಿಂತು ಬಹಳ ದಿನಗಳಾಯಿತು. ಈ ತನಕ ರಿಪೇರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಜೆ.ಇ.ತ್ಯಾಗರಾಜ್, ಅಲ್ಲಿ ಹೈಮಾಸ್ಟ್ ದೀಪದ ಕಂಬವಿದ್ದು ಅದರ ದುರಸ್ಥಿಗೆ ಸುಮಾರು ೪೦ ಸಾವಿರ ರೂಗಳು ವೆಚ್ಚವಾಗುತ್ತದೆ. ಶೀಘ್ರದಲ್ಲೇ ದುರಸ್ಥಿ ಕಾರ್ಯ ಮಾಡಲಾಗುವುದು ಎಂದರು. ನಾಮಿನಿ ಸದಸ್ಯ ನವೀನ್ ಪಟ್ಟಣದ ಹಲವಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಅಪ್ಸರ್, ಲಕ್ಷ್ಮೀ, ಸುಮಿತ್ರ, ಜಬೀನ್ ತಾಜ್ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here