ಪಡಿತರಕ್ಕಾಗಿ ರಾತ್ರಿಯೆಲ್ಲಾ ವನವಾಸ

0
197

ಬೆಂಗಳೂರು (ಕೆಆರ್ ಪುರ): ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆ ಲಕ್ಷಾಂತರ ಮಂದಿಗೆ ಹಸಿವು ನೀಗುತ್ತಿದೆ. ಆದರೆ ಕೆ.ಆರ್.ಪುರದಲ್ಲಿ ಈ ಅನ್ನಭಾಗ್ಯದ ಪಡಿತರ ಪಡೆಯಲು ಹಗಲು ರಾತ್ರಿ ಪರದಾಟ ನಡೆಸುವಂತಾಗಿದೆ.ಕೆಆರ್ ಪುರ ಕ್ಷೇತ್ರದ ದೇವಸಂದ್ರ ಕೆ.ಎಪ್.ಸಿ.ಎಸ್.ಸಿ ಐಟಿ-18 ಪಡಿತರ ಅಂಗಡಿಯಲ್ಲಿ ಪಡಿತರ ಅಹಾರದಾನ್ಯ ಪಡೆಯಲು  ಗಂಟೆಗಟ್ಟಲೆ ಕಾಯುವ ಪರಸ್ಥಿತಿ  ಎದುರಾಗಿದೆ. ಗಂಟೆಗಟ್ಟಲೆಕಾದ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮನ್ಯವಾಗಿತ್ತು. ಪಡಿತರ ಅಂಗಡಿಯಲ್ಲಿ ಸುಮಾರು 4000 ಸಾವಿರ ಮಂದಿಗೆ ಪಡಿತರ ವಿತರಿಸ ಬೇಕಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಮೂರು ಖಾಸಗಿ ನ್ಯಾಯಬೆಲೆ ಅಂಗಡಿ ಮಾಲೀಕರು ವಿವಿಧ ಕಾರಣಗಳಿಂದ ಅಂಗಡಿಗಳನ್ನು ಮುಚ್ಚಿದ ಹಿನ್ನಲೆಯಲ್ಲಿ ನಾಲ್ಕು ಪಡಿತರ ಅಂಗಡಿಯ ಪಡಿತರ ಹೊಣೆ ಒಂದೇ ಅಂಗಡಿಯ ಮೆಲೆ ಬಿದ್ದಿದ್ದು ಇದರಿಂದ ನಾಗರೀಕರು ಪರದಾಟ ಪಡಬೇಕಾಗಿದೆ. ತಂದೆ-ತಾಯಿ ಜಗಳದಲ್ಲಿ ಕೂಸೂ ಬಡವಾದಂತೆ ಖಾಸಗಿ ಪಡಿತರ ವಿತರಕರರ ಅಂಗಡಿಗಳು ಮುಚ್ಚಿರುವುದರಿಂದ ಸಾರ್ವಜನಿಕರ ಪರದಾಟ ಹೆಚ್ಚಿಸಿದೆ. ಮೂರು ಖಾಸಗಿ ಅಂಗಡಿಗಳು ಮುಚ್ಚಿದ್ದರಿಂದ ಪರ್ಯಯ ವ್ಯವಸ್ಥೆ ಮಾಡದ ಹಿನ್ನಲೆಯಲ್ಲಿ ನಾಗರೀಕರು ಮಧ್ಯರಾತ್ರಿಯ ತನಕ ಕಾದು ಪಡಿತರ ಪಡೆಯುವಂತಾಗಿದೆ.  ಮಧ್ಯರಾತ್ರಿವರೆಗೆ ಕಾಯುವ ಗೃಹಿಣಿಯರು, ಹಿರಿಯ ನಾಗರೀಕರು ಎಷ್ಟುಭಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಅಳಲುತೊಡಿಕೊಳ್ಳತ್ತಾರೆ. ದೇವಸಂದ್ರ ಸುತ್ತಮುತ್ತ ಬಿಪಿಎಲ್ ಕಾರ್ಡ್ ಗಳು ಹೊಂದಿದ್ದು, ಕನರ್ಾಟಕ ಅಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿ ಅಹಾರದಾನ್ಯ ಪೂರೈಕೆಯಲ್ಲಿ ವಿಳಂಬಧೋರಣೆಯಿಂದ , ಅಯ್ಯಪ್ಪನಗರ, ದೇವಸಂದ್ರ,ಸಂಜೆನಗರ ,ಮಸೀದಿರಸ್ತೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಈ ನ್ಯಾಯಬೆಲೆ ಅಂಗಡಿಯನ್ನು ಅವಲಂಬಿರುವುದರಿಂದ ಏಕೈಕ ನ್ಯಾಯಬೆಲೆ ಅಂಗಡಿಯಾಗಿದೆ. ಸಾವಿರಾರು ಜನರಿಗೆ ಕಡಿಮೆ ಸಮಯದಲ್ಲಿ ಪಡಿತರ ಅಹಾರದಾನ್ಯ ನೀಡಲು ಸಾಧ್ಯವಾಗದೆ   ಇಲ್ಲಿನ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಅಸಹಾಯಕತೆ ಹೊರಹಾಕುತ್ತಾರೆ. ತಮ್ಮ ದಿನನಿತ್ಯ ಕೆಲಸ ಕಾರ್ಯಗಳು ಬಿಟ್ಟು ಸರತಿ ಸಾಲಿನಲ್ಲಿ ನಿಂತು ಪಡಿತರ ದಾನ್ಯ ಪಡೆಯಲು ಹರಸಾಹಸ ಅಧಿಕಾರಿಗಳ ವಿರುದ್ದ ಜನರು ಅಕ್ರೋಶ ವ್ಯಕ್ತಪಡಿಸಿದರು.  ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ನಾಗರೀಕರ ಸಮಸ್ಯೆ ದೂರಮಾಡಬೇಕಾಗಿದೆ.

LEAVE A REPLY

Please enter your comment!
Please enter your name here