ಪಡಿತರ ವಿತರಣೆಗೆ ಬಯೋಮೆಟ್ರಿಕ್ ನಕಾರ

0
185

ಮಂಡ್ಯ/ಮಳವಳ್ಳಿ: ಪಡಿತರ ವಿತರಣೆಗೆ ಬಯೋಮೆಟ್ರಿಕ್ ಆಳವಡಿಕೆ ಮಾಡುವ ಯೋಜನೆಯನ್ನು ಹಿಂಪಡೆಯಬೇಕು ಹಾಗೂ ಏಪ್ರಿ ಲ್ ಮತ್ತು ಮೇ ಗಳ ನಿರ್ವಹಣಾ ವೆಚ್ಚ ಹಾಗೂ ಸಾರಿಗೆ ವೆಚ್ಚ ವನ್ನು ಭರಿಸದಿದ್ದರೆ ಜೂನ್ ತಿಂಗಳ ಪಡಿತರವನ್ನು ವಿತರಿಸದಂತೆ ಸಭೆ ತೀರ್ಮಾನಿಸಲಾಯಿತು ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಅಧ್ಯಕ್ಷತೆ ತಾಲ್ಲೂಕಿನ ಪಡಿತರ ವಿತರಕರ ಸಭೆ ನಡೆಸಿ ಬಯೋಮೆಟ್ರಿಕ್ ಆಳವಡಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ . ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಜೊತೆಗೆ ರೈತರು ಬೇಸಾಯ ಮಾಡಿಕೊಂಡ ಬಂದಾಗ ಬಯೋಮೆಟ್ರಿಕ್ ಮೂಲಕ ಕೈಬೆರಳು ಬರುವುದಿಲ್ಲ ಎಂದು ವಿವರಿಸಿದರು. ಇದಲ್ಲದೆ ಏಪ್ರಿಲ್‌ ಮತ್ತು ಮೇ ನಲ್ಲಿ ಸಾರಿಗೆ ಹಾಗೂ ನಿರ್ವಹಣಾ ವೆಚ್ಚವನ್ನು ಇನ್ನೂ ಮೂರು ದಿನದೊಳಗೆ ನೀಡಬೇಕು ಇಲ್ಲದಿದ್ದರೆ ಜೂನ್ ತಿಂಗಳ ಪಡಿತರವನ್ನು ವಿತರಿದಂತೆ ತೀರ್ಮಾನಿಸಲಾಯಿತು. ಸಭೆ ಬಳಿಕ ತಹಸೀಲ್ದಾರ್ ಗೂ ಮನವಿ ಸಲ್ಲಿಸಲಾಗುತ್ತದೆ ಎಂದು ಸಂಘ ಅಧ್ಯಕ್ಷ ಮಹದೇವಸ್ವಾಮಿ ತಿಳಿಸಿದರು ಸಭೆಯಲ್ಲಿ ಕಾರ್ಯದರ್ಶಿ ರಾಜು, ನಾಗಪ್ಪ, ಅಂತರಹಳ್ಳಿ ರಾಜಣ್ಣ, ನಾಗರಾಜು, ಭಾಗ್ಯಮ್ಮ, ರತ್ನಮ್ಮ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here