ಪತ್ರಕರ್ತರಿಂದ ಪ್ರತಿಭಟನೆ…

0
300

ಚಾಮರಾಜನಗರ/ಕೊಳ್ಳೇಗಾಲ:ಶಾಸಕರ ವಿರುದ್ದ ವರದಿ ಪ್ರಕಟಿಸಿದ ಇಬ್ಬರು ಪತ್ರಕತ೯ರಿಗೆ ವಿಧಾನಮಂಡಲ ಹಕ್ಕು ಭಾದ್ಯತಾ ಸಮಿತಿ
ಜೈಲು ಶಿಕ್ಷೆ ಮತ್ತು ದಂಡ ವಿಧಿಸಿರುವ ಕ್ರಮ ಖಂಡಿಸಿ ಕೊಳ್ಳೇಗಾಲ ತಾಲೂಕು ಕಾಯ೯ನಿರತ ಪತ್ರಕತ೯ದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ
ಮನವಿ ಸಲ್ಲಿಸಲಾಯಿತು.
ತಾಲೂಕು ಕಚೇರಿ ಮುಂಭಾಗದಲ್ಲಿ ಅಧ್ಯಕ್ಷ ಚಿಕ್ಕಮಾಳಿಗೆ ನೇತೖತ್ವದಲ್ಲಿ ಪ್ರತಿಭಟನೆ ನಡೆಸಿದ ಪತಕತ೯ರು ವಿಧಾನ ಮಂಡಲ ಸಮಿತಿ ವಿಧಿಸಿರುವ
ಗಲ್ಲು ಶಿಕ್ಷೆ ಹಾಗೂ ದಂಡವನ್ನು ವಾಪಸ್ಸು ಪಡೆಯಬೇಕು, ಪತ್ರಿಕಾ ಸ್ವಾತಂತ್ರ ಹರಣಕ್ಕೆ ಮುಂದಾಗಿರುವ ಸ್ವೀಕರ್ ಕೋಳಿವಾಡ್ ಅವರಿಗೆ ದಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.
ಬಳಿಕ ತಹಸಿಲ್ದಾರ್ ಕಾಮಾಕ್ಷಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. ಈಸಂದಭ೯ದಲ್ಲಿ ಮಾಜಿ ಅಧ್ಯಕ್ಷ ಡಿ.ವೆಂಕಟಾಚಲ ಮಾತನಾಡಿ,  ಸಮಿತಿಯ ಸಮಿತಿ ನಿಣ೯ಯ ಖಂಡನಾಹಣ೯ವಾದುದು ಕೂಡವೆ ಇಂತಹ ನಿಣ೯ಯ ಹಿಂಪಡೆಯಬೇಕು ಎಂದರು.
ಅಧ್ಯಕ್ಷ ಚಿಕ್ಕಮಾಳಿಗೆ ಮಾತನಾಡಿ,   ಶಾಸಕರುಗಳಿಗೆ ಮಾನಹಾನಿಯಾಗಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಲಿ, ಅದನ್ನು ಬಿಟ್ಟು ಇಂತಹ ತೀಪು೯ಣ ನೀಡಿರುವಕ್ರಮ ಸರಿಯಲ್ಲ, ಇದೊಂದು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರವಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ  ಕೋಟಂಬಳ್ಳಿ ಗುರುಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ  ಯಾವುದೆ ಶಾಸಕರು ತಮ್ಮ ಮಾಜಿದರೂ ಸಹಾ ಅವರ ವಿರುದ್ದ ಸುದ್ದಿ ಪ್ರಕಟಿಸಬಾರದು,ಅಇವರ ದುರಾಡಳಿತ ಪ್ರಶ್ನಿಸಬಾರದು ಎಂಬ ಹುನ್ನಾರ  ನಿಣ೯ಯದಲ್ಲಿ ಅಡಗಿದೆ. ಸದನ ಸಮಿತಿ ಕೂಡಲೆ ನಿಣ೯ಯವನ್ನು ಮರು ಪರಿಶೀಲಿಸಬೇಕು,  ಇಂತಹ ಬೆಳವಣಿಗೆ ನಡೆದರೆ ರಾಜ್ಯಾದ್ಯಂತಶಾಸಕರ ಅಕ್ರಮಗಳನ್ನು ಸುದ್ದಿ ಮೂಲಕ ಪ್ರಕಟಿಸುವುದೆ ಕಷ್ಟವಾಗಲಿದೆ ಎಂದರು.
ಪ್ರತಿಭಟನೆಗೆ ವಿವಿಧ ಸಂಘಟನೆಗಳ ಹೋರಾಟಗಾರರಾದ   ಪುಟ್ಟರಾಜೇಅರಸ್, ಅಣಗಳ್ಳಿ ದಶರಥ್, ಚಿನ್ನಸ್ವಾಮಿ ಮಾಳಿಗೆ, ಮುತ್ತು ಇನ್ನಿತರರು ಬೆಂಬಲ ಸೂಚಿಸಿದ್ದರು.

ಈಸಂದಭ೯ದಲ್ಲಿ  ಗೌರವಾಧ್ಯಕ್ಷ ಡಿ.ನಟರಾಜು,  ಮಾಜಿ ಅದ್ಯಕ್ಷ ನಿಂಪುರಾಜೇಶ್, ಪ್ರಧಾನ ಕಾಯ೯ದಶಿ೯ ಮಲ್ಲಪ್ಪ,ಖಜಾಂಚಿಮಹಮ್ಮದ್ ಯೂನಸ್, ಉಪಾಧ್ಯಕ್ಷರುಗಳಾದ ಲಿಂಗರಾಜು,  ಮರಿಸ್ವಾಮಿ,  ಸಹ ಕಾಯ೯ದಶಿ೯ ರಂಗಸ್ವಾಮಿ,  ರಾಜೇಂದ್ರಕುಮಾರ್,
ಎಸ್.ರಾಜು,  ನಾಗೇಂದ್ರಸ್ವಾಮಿ,  ಕಾಮಗೆರೆ ಪ್ರಕಾಶ್, ಗುಂಡಾಪುರ ರಮೇಶ್, ಬಸಂತಮೊಟಾಯ್,  ಮರಿಸ್ವಾಮಿ(ಸೋಮು), ಹರಳೆಕುಮಾರ್,
ಮಣಗಳ್ಳಿ ಮಹದೇವ,  ಹಂಪಾಪುರ ಸಿದ್ದರಾಜು, ನಿಂಗರಾಜು, ತಿರುಮಲ್ಲೇಶ್,  ಮಹೇಶ್,   ಶಿವರಾಜು , ಅಜ್ಜಿಪುರ ಮಧು, ವಸಂತ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here