ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಂದ ಪ್ರತಿಭಟನೆ…

0
264

ಬಳ್ಳಾರಿ /ಬಳ್ಳಾರಿ– ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಂದ ಪ್ರತಿಭಟನೆ- ಬಳ್ಳಾರಿಯ ರಾಯಲ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ ಪತ್ರಿಕೋದ್ಯಮದ ಮಿತ್ರರು- ಗೌರಿ ಹತ್ಯೆ ಮಾಡಿದ ಹಂತಕರನ್ನು ಕೂಡಲೇ, ಬಂಧಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯ- ಸರಕಾರಗಳ ವಿರುದ್ದ ಹಾಗ ಮತಿಯವಾದಿಗಳ ವಿರುದ್ಧ, ಘೋಷಣೆ- ರಾಯಲ್ ವೃಥದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ- ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ- ಪ್ರತಿಭಟನೆಗೆ ನಾನಾ ಪ್ರಗತಿಪರ ಸಂಘಟನೆಗಳ ಮುಖಂಡರು ಸಾಥ್.

ಬಳ್ಳಾರಿ-/ಕೂಡ್ಲಿಗಿ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪತ್ರಕರ್ತರು ಮತ್ತು ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪ್ರಗತಿಪರರಿಂದ ಪ್ರತಿಭಟನೆ- ಕೊಟ್ಟೂರು ಪಟ್ಟಣದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ- ಸರಕಾರಗಳ ವಿರುದ್ಧ ಘೋಷಣೆ- ಹಂತಕರ ಬಂಧನಕ್ಕೆ ಒತ್ತಾಯ- ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಪ್ರತಿಭಟನೆ.

ಬಳ್ಳಾರಿ /ಹೊಸಪೇಟೆ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ
ಪತ್ರಕರ್ತರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಪತ್ರಿಕೋದ್ಯಮದ ಮಿತ್ರರು- ಗೌರಿ ಹತ್ಯೆ ಮಾಡಿದ ಹಂತಕರನ್ನು ಕೂಡಲೇ, ಬಂಧಿಸಿ ಸಿಬಿಐ ತನಿಖೆಗೆ ಒತ್ತಾಯಿಸಿ ಸರಕಾರಗಳ ವಿರುದ್ದ ಹಾಗೂ ಮತಿಯವಾದಿಗಳ ವಿರುದ್ಧ, ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು.
ರಾಣಿಪೇಟೆಯಿಂದ
ರೊಟರಿ ಸರ್ಕಲ್, ವಾಲ್ಮಿಕಿ ಸರ್ಕಲ್ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಸಿಎಂಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಗೆ ನಾನಾ ಪ್ರಗತಿಪರ ಸಂಘಟನೆಗಳ ಮುಖಂಡರು ಸಾಥ್ ನೀಡಿದರು.

ಇಂದು ಹಡಗಲಿಯಲ್ಲಿ ಹಿರಿಯ ಲೇಖಕಿ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸಿ ಪ್ರಗತಿ ಪರ, ಪತ್ರಿಕ ಒಕ್ಕೂಟ ವಿದ್ಯಾರ್ಥಿ ಸಂಘಟನೆ ಸೇರಿ ಪ್ರತಿಭಟನೆ.

ಬಳ್ಳಾರಿ /ಹೊಸಪೇಟೆ
ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಂಶೋಧನಾಕಾರರಿಂದ ಪ್ರತಿಭಟನೆ

LEAVE A REPLY

Please enter your comment!
Please enter your name here