ಪತ್ರಿಕಾಭವನದಲ್ಲೂ ಜಾತಿದೋರಣೆ….!?

0
71

ಚಾಮರಾಜನಗರ: ದಲಿತ ಮತ್ತು ಹಿಂದುಳಿದ ವರ್ಗದ ಪತ್ರಕರ್ತರ ಕಡಗಣನೆಗೆ ನೊಂದ ಪತ್ರಕರ್ತರಿಂದ ನಗರದ ಜಿಲ್ಲಾ ಪತ್ರಕರ್ತರ ಭವನದ ಮುಂಭಾಗ ಪ್ರತಿಭಟನೆ.

೪.೧.೨೦೧೬ ರಲ್ಲಿ ಜಿಲ್ಲಾ ಪತ್ರಕರ್ತರ ಭವನವನ್ನ ಎಚ್.ಎಸ್.ಮಹದೇವಪ್ರಸಾದ್ ಉದ್ಘಾಟಿಸಿದ್ರು.
ಆದ್ರೆ ಜಿಲ್ಲೆಯಲ್ಲಿ ಎರಡು ಪತ್ರಕರ್ತರ ಸಂಘಗಳಿದ್ದು, ಅದರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭವನದ ನಿರ್ವಹಣೆ ಒಳಪಟ್ಟಿತ್ತು.

ಆದ್ರೆ ಮತ್ತೊಂದು ಸಂಘ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಭವನದ ಉಪಯೋಗಕ್ಕೆ ಅವಕಾಶಗಳಿರಲಿಲ್ಲ.

ಉದ್ಘಾಟನೆಯಾದಾಗಿನಿಂದ ಇಂದಿನವರೆಗೂ ಜಿಲ್ಲಾ ಪತ್ರಕರ್ತರ ಸಂಘ ಇದರ ಬಗ್ಗೆ ಹೋರಾಟ ಮಾಡಿಕೊಂಡೇ ಬಂದಿದೆ.

ಇದರಲ್ಲಿ ದಲಿತರು, ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಭವನದ ಬಳಕೆಗೆ ಅವಕಾಶ ಕೊಡುತ್ತಿಲ್ಲ. ಆದ್ರೆ ಸರ್ಕಾರ ಈಗ ಜಿಲ್ಲಾಡಳಿತವೇ ಅದರ ನಿರ್ವಣೆ ಮಾಡುವಂತ್ತೆ ಸೂಚಿಸಿದ್ರೂ, ವಾರ್ತಾಧಿಕಾರಿ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.

ಇಂದು ಡಾ.ಅಂಬೇಡ್ಕರ್ ರವರ ಜಿಲ್ಲಾ ಮಟ್ಟದ ವಿಚಾರಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಆದ್ರೆ ವಾರ್ತಾಧಿಕಾರಿ ಅದಕ್ಕೆ ಅವಕಾಶ ಮಾಡಿಕೊಡದೆ ಮತ್ತೊಂದು ಸಂಘದ ಕೈಗೊಂಬೆಯಾಗಿದ್ದಾರೆ.

ಇಂದು ಭವನದ ಗೇಟ್ ಕೂಡ ತೆಗೆಯದೆ ಅವಮಾನ ಮಾಡಿದ್ದಾರೆ. ಇದು ಇನ್ನು ಮುಂದೆ ಮುಂದುವರೆಯಬಾರದು.

ಸರ್ವರಿಗೂ ಸಮಾನ ಅವಕಾಶ ಸಿಗಬೇಕು. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.

LEAVE A REPLY

Please enter your comment!
Please enter your name here