ಪತ್ರಿಕಾ ದಿನಾಚರಣೆ..

0
277

ಯಾದಗಿರಿ/ಹುಣಸಗಿ :ಪಟ್ಟಣದಲ್ಲಿ ಪತ್ರಿಕೆ ದಿನಾಚರಣೆ ಉದ್ಘಾಟಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತಾನಾಡಿ ಪತ್ರಕರ್ತರ ಭವನ ನಿರ್ಮಾಣಕ್ಕೆ 25ಲಕ್ಷ ರೂಪಾಯಿಗಳನ್ನು ಒದಗಿಸುತ್ತೆನೆ ಎಂದು ಹೇಳಿದರು. ಸ್ಥಳ ಗುರುತಿಸಿ ಎಂದು ಹೇಳಿದಾಗ ವೇದಿಕೆ ಮೇಲಿದ್ದ ಜಿ.ಪಂ.ಸದಸ್ಯ ಬಸವರಾಜ್ ಸ್ಥಾವರಮಠ ಸ್ಥಳ ಕೊಡುವ ಭರವಸೆ ನೀಡಿದರು. ಈ ಸಮಾರಂಭದಲ್ಲಿ ತಾಲೂಕಿನ ಸುಮಾರು 10ಜನ ಪತ್ರಿಕಾ ವಿತರಕರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನ ಯಾದಗಿರಿ ಜಿಲ್ಲಾ ಕಾ.ನಿ.ಪ.ಸಂ.ಅಧ್ಯಕ್ಷ ಸಂಜೀವ್ ರಾವ್ ಕುಲಕರ್ಣಿ ವಹಿಸಿದ್ದರು. ದುರದುಂಡೆಶ್ವರ ಮಠದ ಶಿವಕುಮಾರ ಸ್ವಾಮಿಗಳು. ರಾಜ್ಯ ಪರಿಷತ್ ಸದಸ್ಯ ವೆಂಕಟಗಿರಿ ದೇಶಪಾಂಡೆ.ಭೀಮಸೇನ ಕುಲಕರ್ಣಿ, ರಾಘವೇಂದ್ರ ಕಾಮನಟಿಗಿ. ಮಹೇಶ ಕಲಾಲ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನಿಧಾನರಾದ ಮಾಜಿ ಸಿಎಂ ಧರ್ಮಸಿಂಗ್, ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರುಜೀ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು

LEAVE A REPLY

Please enter your comment!
Please enter your name here