ಪರಿನಿರ್ವಾಣ ದಿನಾಚರಣೆ…

0
107

ಚಾಮರಾಜನಗರ:ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 61 ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯ್ತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಮಾಲೆಯನ್ನು ಜಿಲ್ಲಾಧಿಕಾರಿ ಬಿ.ರಾಮು ಅರ್ಪಿಸಿದ್ರು. ಬಳಿಕ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿದ್ರು. ಬಳಿಕ ಮಾತನಾಡಿದ ಇವ್ರು, ಮಹಾನ್ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರ ನೆನೆಸಿಕೊಂಡು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅವ್ರ ಹಾದಿಯಲ್ಲಿ ನಡೆಯಬೇಕಾಗಿದೆ. ಇಡೀ ಪ್ರಪಂಚ ಬಾಬಾ ಸಾಹೇಬರನ್ನು ಮಹಾನ್ ನಾಯಕ ಎಂದು ಗುರುತಿಸಿದೆ. ನಮ್ಮ ದೇಶದಲ್ಲಿ ಅವ್ರು ಹುಟ್ಟಿ ಅನೇಕ ಕಷ್ಟಗಳನ್ನು ಅನುಭವಿಸಿ ಮುಂದೆ ಯಾರೂ ಸಹಾ ಇಂತಹ ಕಷ್ಟವನ್ನು ಅನುಭವಿಸಬಾರದೆಂದು ಅರಿತು ಸಂವಿಧಾನವನ್ನು ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಅವರನ್ನು ನೆನೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ತಿಳಿಸಿದ್ರು.

LEAVE A REPLY

Please enter your comment!
Please enter your name here