ಪರಿವರ್ತನಾರ್ಯಾಲಿ ಅಲ್ಲ ಪಶ್ಚಾತ್ತಾಪರ್ಯಾಲಿ..

0
198

ರಾಯಚೂರು:ಬಿಜೆಪಿ ಪರಿವರ್ತನಾರ್ಯಾಲಿ ನಿಜವಾಗಿಯೂ ಜನರ ಪರಿವರ್ತನೆಯ ಸಲುವಾಗಿ ಅಲ್ಲಾ ಅದು ಅವರ ಕೇಂದ್ರ ಸರ್ಕಾರದ 5 ವರ್ಷದ ದುರಾಡಳಿತದ ಪಶ್ಚಾತಾಪದ ರ್ಯಾಲಿ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಸಚಿವ ಹೆಚ್.ಕೆ ಪಾಟೀಲ್ ಟೀಕಿಸಿದರು.ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರು ಅವರು ಪರಿವರ್ತನಾ ರ್ಯಾಲಿ ಅಲ್ಲ ಅವರು ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳಲು ಮತ್ತು ಕೇಂದ್ರ ಸರಕಾರದ ದುರಾಡಳಿತದ ಪಶ್ಚಾತಾಪವನ್ನು ಅರಿಯಲು ರ್ಯಾಲಿಯನ್ನು ಮಾಡುತ್ತಿದ್ದಾರೆ ಎಂದರು.ನಮ್ಮ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಕಡೆಗಳಲ್ಲಿ ಮಹತ್ವದ ಕಾರ್ಯವನ್ನು ನಡೆಸಿದೆ. ನಮ್ಮ ರಾಜ್ಯ ಸರ್ಕಾರವು ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಬಯಲು ಬಹಿರ್ದೇಸೆ ಮುಕ್ತ ಕರ್ನಾಟಕವನ್ನಾಗಿ ಮಾಡುವ ಪಣವನ್ನುತೊಟ್ಟಿದೆ. ಇದಕ್ಕೆ ಅನೇಕ ಇಲಾಖೆಗಳು ಮತ್ತು ಶಿಕ್ಷಕರು, ಆಶಾ ಕಾರ್ಯಕರ್ತರು, ಅನೇಕ ಸಂಘಟನೆಯವರು ಕೈ ಜೋಡಿಸಿದ್ದಾರೆ. ಹಾಗೂ ನಮ್ಮ ಸರ್ಕಾರವು ಆಡಳಿತಕ್ಕೆ ಬಂದಾಗ ಕೇವಲ 35% ಗ್ರಾಮಗಳಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿದ್ದವು. ಪ್ರಸ್ತುತ 80% ಕ್ಕೆ ತಲುಪಿದ್ದೇವೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಗ್ರಾಮಗಳು ಬಯಲು ಬಹಿರ್ದೇಸೆ ಮುಕ್ತ  ಗ್ರಾಮಗಳಾಗಿ ಮಾರ್ಪಟ್ಟಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಬಿಟ್ಟು ಇನ್ನೂ ಉಳಿದ 4 ಜಿಲ್ಲೆಗಳಲ್ಲಿ ನಮ್ಮ ಕೆಲಸ ನಡೆಯಬೇಕಿದೆ.ಮುಖ್ಯಮಂತ್ರಿಗಳು ರೈತರ ಜೊತೆಗೆ ಚೆರ್ಚೆಯನ್ನು ಮಾಡಿ ರೈತರ ತೊಂದರೆಗಳಿಗೆ ಈಗಾಗಲೇ ಸಮಾಲೋಚನೆಯನ್ನು ನಡೆಸಿದ್ದಾರೆ. ಕೂಡಲಸಂಗಮ, ಕೊಪ್ಪಳದಲ್ಲಿ ರೈತರೋಡನೆ ಸಮಾಲೋಚನೆ ಮಾಡಿ ಅವರ ಅನೇಕ ಸಮಸ್ಯೆಗಳಿಗೆ ಸ್ಪಂದನೆ ನೀಡುತಿದ್ದಾರೆ.
ಗ್ರಾಮ ಪಂಚಾಯಿತಿಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದವರ ಖಾತೆಗೆ ಹಣಜಮಾ ಮಾಡಲು ಈ ಬಾರಿ ತಡವಾಗಿ ಬಂದಿರುವು ವಿಷಾಧನೀಯ ಕಾರಣ ಕೇಂದ್ರ ಸರ್ಕಾರದವರು ಈ ಬಾರಿ ಉದ್ಯೋಗಖಾತ್ರಿಯ ಹಣವನ್ನು ತಡವಾಗಿ ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಈ ಬಾರಿ ಗ್ರಾಮೀಣ ಭಾಗದ ಜನರು ಬೇರೆಕಡೆ ಗುಳೆ ಹೋರುವುದು ನಮ್ಮ ಸರ್ಕಾರದ ಅನೇಕ ಯೋಜನೆಗಳನ್ನು ಕೊಡುವುದರ ಮೂಲಕ ಕಡಿಮೆ ಮಾಡಿದ್ದಾರೆ ಎಂದರು.ಈ ಸಂಧರ್ಭದಲ್ಲಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‍ರಾಜ್ಯ ಸಚಿವರಾದ ಹೆಚ್.ಕೆ ಪಾಟೀಲ್, ಎಂ.ಎಸ್.ಐ.ಎಲ್‍ನ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ, ಆರ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಪಂಪನಗೌಡ ಬಾದರ್ಲಿ, ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಗೌಡಬಾದರ್ಲಿ, ರೌಡಕುಂದ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಬಸವರಾಜ ಹೀರೆಗೌಡ್ರು, ಕಾನಿಹಾಳ ಮಲ್ಲನಗೌಡ,  ಸಿ. ಹೆಚ್. ಶ್ರೀನಿವಾಸ ಯುವ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here